ಉಪನ್ಯಾಸಕರಿಗೆ ಕೌಶಲ್ಯಾಭಿವೃದ್ದಿ ಕಾರ್ಯಗಾರ..

264

ಬೆಂಗಳೂರು/ಕೆ.ಆರ್.ಪುರ;- ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಥಿಯಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ನೆರವಿನಿಂದ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೈನೆಟ್ ಎಲಿಮೆಂಟ್ ಮೆತೆಡ್ಸ್ ಅಂಡ್ ಸ್ಟ್ರೆಸ್ ಅನಾಲಿಸಿಸ್ ಕುರಿತು ಎರಡು ವಾರಗಳ ಉಪನ್ಯಾಸಕರ ಕೌಶಲ್ಯಾಭಿವೃದ್ದಿ ಕಾರ್ಯಗಾರಕ್ಕೆ ಸಿಎಸ್ಎಂ ಸಾಫ್ಟ್ವೇರ್ನ ಜನರಲ್ ಮ್ಯಾನೇಜರ್ ಸಿ.ಎನ್ ಪಾಟೀಲ್ ಚಾಲನೆ ನೀಡಿ  ಮಾತನಾಡಿದರು. ಪ್ರತಿ ವರ್ಷ ಬದಲಾಗುತ್ತಿರುವ ಅತ್ಯಾದುನಿಕ ಉಪಕರಣಗಳನ್ನು ವಿದ್ಯಾಥರ್ಿಗಳು ಬಳಸಲು ಉತ್ತಮ ತರಬೇತಿ ಅಗತ್ಯವಿದೆ ಎಂದರು. ತಾಂತ್ರಿಕ ಕಾಲೇಜಿನಲ್ಲಿ ಮೊದಲು ಉಪನ್ಯಾಸಕರಿಗೆ ಇಂದಿನ ಕೈಗಾರಿಕೆಗಳಲ್ಲಿ ಬಳಸಬಹುದಾದ ಅತ್ಯಾಧುನಿಕ ಉಪಕರಣಗಳ ಉಪಯೋಗವನ್ನು ತಿಳಿಸಿಕೊಡುವ ಅಗತ್ಯವಿದೆ ಎಂದರು. ಶೈಕ್ಷಣಿಕ ಪಠ್ಯಕ್ರಮದಲ್ಲಿ ಕೈಗಾರಿಕೆಗೆ ಹೊಂದಿಕೊಳ್ಳುವಂತೆ ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುಣೆಯ ಫೈನೆಟ್ ಟು ಇನ್ಫನೆಟ್ ಸಂಸ್ಥೆಯ ಮುಖ್ಯ ಕಾರ್ಯನಿವರ್ಾಹಕ ನಿದರ್ೇಶಕರಾದ ನಿತಿನ್ ಎಸ್.ಗೋಖಲೆ ಮಾತನಾಡಿ ಉಪನ್ಯಾಸಕರಿಗೆ ನೀಡಲಾಗುತ್ತಿರುವ ಕೌಶಲ್ಯಾಭಿವೃದ್ದಿ ಕಾರ್ಯಗಾರದ ಮಹತ್ವವನ್ನು ವಿವರಿಸುತ್ತಾ ಅದರಿಂದ ವಿದ್ಯಾಥರ್ಿಗಳಿಗೆ ಆಗುವ ಉಪಯೋಗದ ಬಗ್ಗೆ ವಿವರಿಸಿದರು. ಕೈಗಾರಿಕೆಗಳಲ್ಲಿ ಬಳಸಬಹುದಾದ ನೂತನ ಉಪಕರಣಗಳ ಬಳಿಕೆ ಮತ್ತು ಉಪಯೋಗಿಸಲು ಇಂತಹ ಕೌಶಲ್ಯಾಭಿವೃದ್ದಿ ಕಾರ್ಯಗಾರ ವಿದ್ಯಾಥರ್ಿಗಳಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು. ಕೌಶಲ್ಯಾಭಿವೃದ್ದಿ ಕಾರ್ಯಗಾರ ಕಾರ್ಯಕ್ರಮಕ್ಕೆ ರಾಜ್ಯದ ಕಾಲೇಜುಗಳಿಂದ ಹಾಗೂ ನೆರೆಯ ರಾಜ್ಯದ ಬೇದಕ ಸಿಬ್ಬಂದಿ ಪಾಲ್ಗೊಂಡರು.
ಈ ಸಂದರ್ಬದಲ್ಲಿ ಪ್ರಾಂಶುಪಾಲರಾದ ಡಾ|| ಎಲ್.ಸುರೇಶ್, ಕೇಂಬ್ರಿಡ್ಜ್ ಸಮೂಹ ಸಂಸ್ಥೆಗಳ ಅದ್ಯಕ್ಷರಾದ ಡಿ.ಕೆ.ಮೋಹನ್, ಕಾರ್ಯಕ್ರಮದ ಸಂಯೋಜಕರಾದ ಡಾ|| ಕೆ.ಎಲಂಗೋವರನ್, ಡಾ|| ಕೆ.ಎನ್.ಶಶಿಧರ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ|| ಚಂದ್ರಶೇಕರ್ ಯು.ಪಿ ಹಾಗೂ ಬೋದಕ ಸಿಬ್ಬಂದಿ ಹಾಜರಿದ್ದರು.