ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ..

190

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಇಂದು ಅರಿಕೆರೆ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಗಡಿದಂ ಶ್ರೀ ಗಾಯತ್ರಿ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರಕೂರು, ಲಘುಮದ್ದೇಪಲ್ಲಿ, ಕಾಮಸಾನಪಲ್ಲಿ,ಪೇನುಮಲೆ, ಪುಟ್ಟಪರ್ತಿ, ಯಲ್ಲಂಪಲ್ಲಿ, ಪಂಚಾಯಿತಿ ಕಾರ್ಯಕರ್ತರು ಕಾರಕೂರು ರಾಮಚಂದ್ರ ರೆಡ್ಡಿ ಅವರ ಬಾರಿ ಬೆಂಬಲಿಗರೊಂದಿಗೆ ಸುಮಾರು 300 ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.

ಸೇರ್ಪಡೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಿಸಾನ್ ಮೋರ್ಚಾ ವಕ್ತಾರರು ಹಾಗೂ ಚುನಾವಣಾ ಸಂಚಾಲಕರು ಚರ‍್ಲಪಲ್ಲಿ ನರಸಿಂಹ ರೆಡ್ಡಿ ಮಾತನಾಡಿರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಎಸ್.ಟಿ. ಚಂದ್ರಮೋಹನ್, ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಆಂಜೀನಪ್ಪ, ರಾಜ್ಯ ಓಬಿಸಿ ಕಾರ್ಯಕಾರಣಿ ಸದಸ್ಯ ಜಿ.ವಿ. ಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿಗಳು ಮಂಜುನಾಥ ಮತ್ತು ನಂಜೇಶ್ ರೆಡ್ಡಿ, ವೆಂಕಟೇಶ್ ವೆಂಕಟಶಿವಪ್ಪ, ಮುರಳಿ,ಲಕ್ಷ್ಮೀನಾರಾಯಣ,ಮುರಳಿಧರ್, ನರಸಿಂಹಪ್ಪ, ಆಂಜನೇಯ, ನಾರಯಣನಾಯಕ್, ಮಂಜುಳಾಭಾಯಿ, ಪ್ರಭಾನಾಯ್ಡು, ಸಿ.ಎನ್.ಧೀರಜ್, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ಧರು.