ಖೋಟಾ ನೋಟು ಪ್ರಕರಣದಲ್ಲಿ ಮೂವರು ಬಂಧನ..

190

ವಿಜಯಪುರ:ಖೋಟಾ ನೋಟು ಮುದ್ರಿಸುತ್ತಿದ್ದ ಮೂವರು ಆರೋಪಿಗಳನ್ನು ಡಿಸಿಐಬಿ ಇನ್ಸ್ ಪೆಕ್ಟರ್ ಚಂದ್ರಕಾಂತ. ಎಲ್.ಟಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ ಘಟನೆ ನಡೆದಿದೆ. ವಿಜಯಪುರ ನಗರದ ದರ್ಗಾ ಜೈಲು ಬಳಿಯ ಮನೆಯಿಂದರಲ್ಲಿ ಖೋಟಾ ನೋಟು ತಯಾರಿಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೋಲಿಸರ ದಾಳಿ ಮಾಡಿದ್ದಾರೆ. ಹಾಜಿಮಸ್ತಾನ ವಾಲೀಕಾರ್(೨೩), ಸೀರಾಜ್ ಮಳ್ಳಿ(೨೭), ಮೇಹಬುಬ್ ವಾಲೀಕಾರ್(೨೩) ಬಂಧಿತ ಆರೋಪಿಗಳಾಗಿದ್ದು, ಇನ್ನು ಆರೋಪಗಳಿಂದ 200, 500 ಹಾಗೂ 2000 ಮುಖಬೆಲೆಯ ಒಟ್ಟು 67200ರೂ ಮೌಲ್ಯದ ಖೋಟಾ ನೋಟುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಖೋಟಾ ನೋಟು ಮುದ್ರಿಸುವ 38 ಪೇಪರ್‌ಗಳು, 2ಎಪ್ಸಾನ್ ಕಂಪನಿಯ ಪ್ರೀಂಟರ್‌ಗಳನ್ನ ಜಪ್ತಿ ಮಾಡಿದ್ದಾರೆ. ಈ ಕುರಿತು ಡಿಸಿಐಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

.