ದಶಮಾನೋತ್ಸವ ದಿನಾಚರಣೆ..

365

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕು ಆಡಳಿತ ವತಿಯಿಂದ ತಾಲೂಕಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಅವಿಭಾಜ್ಯ ಕೋಲಾರ ಜಿಲ್ಲೆಯಿಂದ 2007ರಲ್ಲಿ ವಿಭಜನೆ ಹೊಂದಿ 10 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ದಶಮಾನೋತ್ಸವ ದಿನಾಚರಣೆಯನ್ನು ನಗರದ ಪಾಲಿಟೆಕ್ನಿಕ್ ಹಾಸ್ಟೆಲ್ ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ದಶಮಾನೋತ್ಸವದ ಅಂಗವಾಗಿ ಮಾನ್ಯ ಶಾಸಕರಾದ ಜೆಕೆ ಕೃಷ್ಣಾರೆಡ್ಡಿ ಹಾಗೂ ತಾಲೂಕಿನ ತಹಸೀಲ್ದಾರ್ ಅಜಿತ್ ಕುಮಾರ್ ರೈ ಇವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಬೆಳಗ್ಗೆ 6 ಗಂಟೆಗೆ ಆರೋಗ್ಯದೆಡೆಗೆ ನಮ್ಮ ನಡಿಗೆ ಹಾಗೂ ಸ್ವಚ್ಛತಾ ಕಾರ್ಯಕ್ರಮ, ರೆಡ್ ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ, 9 ಗಂಟೆಗೆ ನಗರಸಭೆ ಸಭಾಂಗಣ ಹಮ್ಮಿಕೊಳ್ಳಲಾಗಿತ್ತು,

ದಶಮಾನೋತ್ಸವ ತೇರುವ ಚಾಲನೆ ಪ್ರವಾಸ ಮಂದಿರದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಕಲಾತಂಡಗಳು ಮತ್ತು ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ವಸ್ತು ಪ್ರದರ್ಶನ ಮತ್ತು ಮಳಿಗೆಗಳ ಉದ್ಘಾಟನೆ 11 ಗಂಟೆಗೆ ಕಾಲೇಜ್ ಪಾಲಿಟೆಕ್ನಿಕ್ ಹಾಸ್ಟೆಲ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಜೆ ನಾಲ್ಕು ಗಂಟೆಗೆ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು.

ನಂತರ ಮಾತನಾಡಿದ ಶಾಸಕ ಜೆಕೆ ಕೃಷ್ಣಾರೆಡ್ಡಿ ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಯು ಅವಿಭಾಜ್ಯ ಕೋಲಾರ ಜಿಲ್ಲೆಯಿಂದ 2007ರಲ್ಲಿ ವಿಭಜನೆ ಹೊಂದಿ 23/08/2017 ಕ್ಕೆ ವರ್ಷ ಪೂರೈಸಿದೆ ಅದರ ಸಲುವಾಗಿ ದಶಮಾನೋತ್ಸವ ಆಚರಣೆಯನ್ನು ತಾಲ್ಲೂಕಿನಲ್ಲಿ ಮಾಡುತ್ತಿದೆವು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಜೆಕೆ ಕೃಷ್ಣಾ ರೆಡ್ಡಿ , ತಾಲೂಕಿನ ದಂಡಾಧಿಕಾರಿಗಳಾದ ಅಜಿತ್ ಕುಮಾರ್ ರೈ ,ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ವಾಣಿ ಕೃಷ್ಣರೆಡ್ಡಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ, ಉಪಾಧ್ಯಕ್ಷೆ ಸಂಜಾತ ಶಿವಪ್ಪ, ನಗರಸಭೆ ಆಯುಕ್ತ ರಾದ ನಾಗೇಂದ್ರ ಬಾಬು, ಕ್ಷೇತ್ರ ಶಿಕ್ಷಣಾಧಿಕಾರ ಮಹಮ್ಮದ್ ಖಲೀಲ್ ,ನಗರಸಭೆ ಸದಸ್ಯರು, ತಾಲೂಕು ಆಡಳಿತ, ಶಾಲೆಯ ಶಿಕ್ಷಕರು, ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ,ಹಾಗೂ ತಾಲೂಕಿನ ಸಾರ್ವಜನಿಕರು ಉಪಸ್ಥಿತರಿದ್ದರು.