ಕೂಲಿ ಕಾರ್ಮಿಕರ ಮೇಲೆ ಹಲ್ಲೆ.

605

ಚಿಕ್ಕಬಳ್ಳಾಪುರ /ಚಿಂತಾಮಣಿ:ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ.

ನಗರದ ಎಪಿಎಂಸಿ KNS ರಾಘವೇಂದ್ರ ಟ್ರೇಡರ್ಸ ಅಂಗಡಿ ಮಾಲಿಕ ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲು ಬಂಡೆ ಎತ್ತಿದ ಕಾರಣ ಕೂಲಿ ಕಾರ್ಮಿಕ ವೆಂಕಟ್ರಯಪ್ಪ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳ್ಳಂಬೆಳಗ್ಗೆ ನಡೆದಿದೆ .
ಘಟನೆ ನಡೆದ ನಂತರ ಕೂಲಿ ಕಾರ್ಮಿಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ .

ವಿಷಯ ತಿಳಿದಂತೆ ಡಿಎಸ್ಎಸ್ ಸಂಘಟನೆಯು ಕೂಲಿ ಕಾರ್ಮಿಕರ ಪರವಾಗಿ ನಂದೀಶ್ ಮಾಲೀಕ ಅಂಗಡಿ ಮುಂದೆ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದರು. ನಂತರ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸಮಾಧಾನ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.