ರೈತರ ಬೃಹತ್ ಸಮಾವೇಶಕ್ಕೆ ತೆರಳುತ್ತಿರುವ ರೈತ ಮುಖಂಡರು.

202

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಬೃಹತ್ ಸಮಾವೇಶಕ್ಕೆ ತೆರಳುತ್ತಿರುವ ಬಾಗೇಪಲ್ಲಿ ರೈತ ಮುಖಂಡರು.ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮಣರೆಡ್ಡಿ ಮಾತನಾಡಿ ದೇಶ ಸ್ವಾತಂತ್ರ್ಯ ಪಡೆದು ಏಳು ದಶಕಗಳ ಈ ಏಳು ಬೀಳುಗಳ ನಡುವೆ ಕೃಷಿಕರ ಸ್ಥಿತಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ ಈ ಸಂಕಷ್ಟಗಳನ್ನು ಅರಿತು ಬಗೆಹರಿಸುವಲ್ಲಿ ಯಾವ ರಾಜಕೀಯ ಪಕ್ಷಗಳು ಪ್ರಾಮಾಣಿಕ ಪ್ರಯತ್ನ ಮಾಡದಿರುವುದು ರೈತರ ದುರಂತವೇ ಸರಿ .

ನಾಗರಿಕತೆ ಬೆಳೆದಂತೆ ಕೃಷಿ ಉತ್ಪನ್ನಗಳು ಗುಣಾತ್ಮಕವಾಗಿ ಬದಲಾವಣೆಗೊಳ್ಳುತ್ತಾ ಹೆಚ್ಚೆಚ್ಚು ಬೆಳೆದು ದೇಶದ ಎಲ್ಲ ಜೀವಿಗಳಿಗೂ ಸಮೃದ್ಧಿಯಾದ ಆಹಾರ ಒದಗಿಸುವಲ್ಲಿ ರೈತರ ಶ್ರಮ ಬಹುದೊಡ್ಡದು ಆದರೆ ಈ ಪರಿಸ್ಥಿತಿಯಲ್ಲಿ ಮಳೆ ಬರದಿದ್ದರೆ ಒಂದು ರೀತಿಯ ಬರಗಾಲವಾದರೆ ಮಳೆ ಬಂದು ಪ್ರವಾಹ ಪೀಡಿತವಾದರೆ ಮತ್ತೊಂದು ರೀತಿಯ ಬರಗಾಲ ಇದರ ನಡುವೆ ಆಗೊಮ್ಮೆ ಈಗೊಮ್ಮೆ ಉತ್ತಮ ಮಳೆಯಾಗಿ ಬೆಳೆ ಸ್ವಲ್ಪ ಚೆನ್ನಾಗಿ ಬಂದರೆ ಸರಿಯಾದ ಬೆಲೆ ಸಿಗದೆ ಅನುಭವಿಸು ಭಾರಿ ನಷ್ಟವೂ ಇದೆ ಹೀಗಾಗಿ ವರ್ಷದಿಂದ ವರ್ಷಕ್ಕೆ ದೇಶದ ರೈತರ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ.
ಈ ನಷ್ಟವನ್ನು ತಪ್ಪಿಸಲು ಮುಂದಾಗಬೇಕಾದ ಸರಕಾರಗಳು ಮೌನವಾಗಿರುವುದು ರೈತರ ಪಾಲಿಗೆ ದುರಂತವೇ ಸರಿ .
ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಡಾ ಸ್ವಾಮಿನಾಥನ್ ವರದಿಯನ್ನು ಯಥಾವತ್ ಜಾರಿಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು ಅಧಿಕಾರಕ್ಕೆ ಬಂದ ಮೇಲೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ .
ರೈತರಿಗೆ ಡಾ. ಸ್ವಾಮಿನಾಥನ್ ವರದಿಯ ಪ್ರಕಾರ ಬೆಲೆ ನಿಗದಿಗೊಳಿಸುವುದು ಅನಿವಾರ್ಯ ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ ಅಲ್ಲದೇ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ಭರವಸೆ ಕೊಟ್ಟು ಈಗ ಸಾಲ ಮನ್ನಾ ಮಾಡಿ ಎಂದು ಹೇಳುವುದು ರೈತರಿಗೆ ಫ್ಯಾಷನ್ ಆಗಿದೆ ಎಂಬ ಉಡಾಫೆ ಹಾಗೂ ಬೇಜವಾಬ್ದಾರಿಯ ಹೇಳಿಕೆಯನ್ನು ನೀಡುತ್ತಿರುವುದು ದೇಶದ ಸಮಸ್ತ ರೈತರಿಗೆ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಮಾಡಿದ ಮಹಾ ಮೋಸವಾಗಿದೆ .
ಕರ್ನಾಟಕದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಸಹಕಾರಿ ಸಮಸ್ಯೆಗಳಲ್ಲಿ ಇರುವ ರೈತರ ಸಾಲದಲ್ಲಿ ಕೇವಲ ಐವತ್ತು ಸಾವಿರ ವರೆಗೆ ಸೀಮಿತಗೊಳಿಸಿ ಮನ್ನಾ ಮಾಡುತ್ತದೆ .
ಉಳಿದ ಸಾಲವನ್ನು ರಾಜ್ಯ ಸರ್ಕಾರ ಕೂಡಲೇ ಮನ್ನಾ ಮಾಡಬೇಕು ರೈತರ ಸಾಲ ಅತಿ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುತ್ತದೆ ಈ ಸಾಲವನ್ನು ಭಾರತ ಸರ್ಕಾರ ಕೂಡಲೇ ಮನ್ನಾ ಮಾಡಬೇಕು ಭಾರತ ಸರ್ಕಾರ ಸಾಲ ಮನ್ನಾ ಮಾಡದೇ ಹೋದರೆ ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಕೇಂದ್ರ ಸರ್ಕಾರ ಡಾ ಸ್ವಾಮಿನಾಥನ್ ವರದಿಯಂತೆ ರೈತರ ಉತ್ಪನ್ನಗಳಿಗೆ ಸೂಕ್ತ ದರವನ್ನು ಕೂಡಲೇ ಘೋಷಣೆ ಮಾಡಬೇಕು .

ಅಲ್ಲದೇ ರೈತರು ಕೂಡ ರಾಜಕೀಯ ತೀರ್ಮಾನಗಳಲ್ಲಿ ನಿರ್ಣಾಯಕ ಪಾತ್ರಗಳನ್ನು ವಹಿಸಬೇಕಾಗಿದೆ ಹಳ್ಳಿಗರು ಎಂದರೆ ಕೇವಲ ಹಣಕ್ಕೆ ಹೆಂಡಕ್ಕೆ ಜಾತಿಗೆ ಧರ್ಮಕ್ಕೆ ವೋಟನ್ನು ಮಾರಿಕೊಳ್ಳುವಂತಹ ಮೂರನೇ ದರ್ಜೆಯ ಪ್ರಜೆಗಳಾಗಿದೆ, ಈ ದೇಶದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಇಡುವ ಪ್ರಜೆಗಳಾಗಿದ್ದು ಎನ್ನುವುದನ್ನು ಸಾರಿ ಹೇಳಬೇಕಾಗಿದೆ.
ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ರೈತರಾದ ನಾವೆಲ್ಲರೂ ಈ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಇದು ನಾಡಿನ ರೈತ ಬಾಂಧವರಿಗೆ ಇರುವ ಒಂದು ಸದವಕಾಶ ಈ ಅಮೂಲ್ಯ ತೀರ್ಮಾನವನ್ನು ಕೈಗೊಳ್ಳಲು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ದಿನ ಬುಧವಾರ ರೈತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ .
ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸ್ವಾಭಿಮಾನಿ ರೈತ ಬಾಂಧವರು ಸಮಾವೇಶದಲ್ಲಿ ಭಾಗವಹಿಸುವರು ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲಿದ್ದೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ತಾಲ್ಲೂಕು ಹಸಿರು ಸೇನೆ ಮತ್ತು ರೈತ ಸಂಘದ ಮುಖಂಡರಾದ ಜಿ ಗಂಗಾಧರ್, ನರೇಶ್, ನವೀನ್,ನಾರಾಯಣಸ್ವಾಮಿ ಮಂಜುನಾಥ್ , ಗಂಗಾಧರ್ ಕೊಂಡರೆಡ್ಡಿಹಳ್ಳಿ ಮಂಜುನಾಥ್ ಎಂಆರ್ ಕಾನೂನು ಸಲಹೆಗಾರರು , ಎಂ ಬೈಯಪ್ಪ ತಾಲ್ಲೂಕು ಕಾರ್ಯದರ್ಶಿ, ಚೌಡರೆಡ್ಡಿ ಉಪಾಧ್ಯಕ್ಷರು ,ಮಧುಸೂದನ್ ರೆಡ್ಡಿ ಚೇಳೂರು ಪಂಚಾಯಿತಿ ಅಧ್ಯಕ್ಷರು ,ಬಿ ನರಸಿಂಹಪ್ಪ ಚೇಳೂರು ಹೋಬಳಿ ಅಧ್ಯಕ್ಷರು,
ಮೌಲ್ಯ ಚಂದ್ರ ರೆಡ್ಡಿ ಚೇಳೂರು ಹೋಬಳಿ ಗೌರವ ಅಧ್ಯಕ್ಷ ರು ಈಶ್ವರರೆಡ್ಡಿ, ಮೂರ್ತಿ ಇತರ ರೈತ ಮುಖಂಡರು ಹಾಜರಿದ್ದರು ,