ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

178

ಬೆಂಗಳೂರು/ ಕೆ ಆರ್ ಪುರ:-ವಿಧಾನಸಭಾ ಕ್ಷೇತ್ರದಲ್ಲೇ ಪ್ರಮುಖ ಬಿಂದುವಾಗಿರುವುದು ಕೆಆರ್ ಪುರ ವಾರ್ಡ್, ಈ ವಾರ್ಡು ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಕಾಲೇಜು, ಪೊಲೀಸ್ ಕ್ವಾಟ್ರಸ್ಗಳು, ಪೊಲೀಸ್ ಠಾಣೆ, ರಾಜೀವ್ ಗಾಂಧಿ ಕ್ರೀಡಾಂಗಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿವೆ. ಇವುಗಳ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಅದರಂತೆಯೇ ಇಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಅವರು ಕೇಂದ್ರದ 14ನೆ ಫೈನಾನ್ಸ್ ಅನುದಾನದಡಿಯ ಎರಡು ಕೋಟಿ ರೂ.ವೆಚ್ಚದಲ್ಲಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ವಾಕಿಂಗ್ ಟ್ರಾಕ್, ಪ್ರೇಕ್ಷಕರ ಗ್ಯಾಲರಿ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ. ಹಿರಿಯರು ವಿಶ್ರಾಂತಿ ತೆಗೆದುಕೊಳ್ಳಲು, ಯುವಕರು, ಮಕ್ಕಳು ಆಟವಾಡಲು ರಾಜೀವ್ ಗಾಂಧಿ ಕ್ರೀಡಾಂಗಣದ ಅಭಿವೃದ್ಧಿ ಅತ್ಯಮೂಲ್ಯ ವಾಗಿತ್ತು. ಈ ಜಾಗವನ್ನು ಉಳಿಸಲು ಮಾಜಿ ಸಚಿವ ದಿ.ಎ.ಕೃಷ್ಣಪ್ಪ ಹಾಗೂ ಕೆಆರ್ಪುರದ ಸ್ಥಳೀಯ ಹಿರಿಯ ನಾಗರೀಕರು ಶ್ರಮವಹಿಸಿದ್ದಾರೆ. ಇಂದು ಗುದ್ದಲಿ ಪೂಜೆ ನೆರವೇರಿಸಿದ್ದು, ಆರು ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ. ಇದರ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಬಿಬಿಎಂಪಿ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದ್ದಾರೆ.
ಇದೇ ವೇಳೆ ವಾರ್ಡ್ ಅಧ್ಯಕ್ಷ ಜಿಮ್ ರಮೇಶ್, ಮುಖಂಡರು ಮಂಜುನಾಥ್ ರೆಡ್ಡಿ, ಜಗದೀಶ್, ವೆಂಕಟೇಶ್ ಶೆಟ್ಟಿ ಮುಂತಾದವರು ಹಾಜರಿದ್ದರು.

ಬೈಟ್: ಪೂರ್ಣಿಮಾ ಶ್ರೀನಿವಾಸ್ ಬಿಬಿಎಂಪಿ ಸದಸ್ಯೆ ಕೆಆರ್ಪುರ ವಾರ್ಡ್.