ಬಿಜೆಪಿಗರ ವಿರುದ್ದ ಕಿಡಿಕಾರಿದ ರೆಡ್ಡಿ….

219

ಬೆಂಗಳೂರು/ಮಹದೇವಪುರ;- ಚುನಾವಣೆ ಸಮೀಪ ಬಂದಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಸ್ಲಮ್ಗಳ ನೆನಪು ಬಂದಂತಿದೆ, ಅಧಿಕಾರ ಇದ್ದಾಗ ಕೊಳಗೇರಿ ನಿವಾಸಿಗಳನ್ನು ಮನುಷ್ಯರೆಂದೂ ಸಹ ಪರಿಗಣಿಸಿರಲಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಿಡಿ ಕಾರಿದರು.

ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಬಳಿ ಆಯೋಜಿಸಿದ್ದ ಮಾರತ್ತಹಳ್ಳಿ ಮತ್ತು ದೊಡ್ಡನಕುಂದಿ ವಾರ್ಡ್ ಕಾಂಗ್ರೇಸ್ ಕಾರ್ಯಕರ್ತರ ಸಭೆ ಹಾಗು ಬಿಬಿಎಂಪಿ ಲೆಕ್ಕ ಪತ್ರ ಸ್ಥಾಯಿ ಸಮಿತ ಅಧ್ಯಕ್ಷ ಎನ್.ರಮೇಶ್ ಮತ್ತವರ ತಂಡದ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಳೆದ ಬಾರಿ ಅಧಿಕಾರದಲ್ಲಿದ್ದ ವೇಳೆ ಸ್ಲಮ್ಗಳ ಬಗ್ಗೆ ತಲೆ ಕೆಡಿಸಿಕೊಂಡ ಉದಾಹರಣೆಗಳೆ ಇಲ್ಲ, ಇಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಅಶೋಕ್, ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರುಗಳಿಗೆ ಸ್ಲಮ್ಗಳ ನೆನಪು ಬಂದ ನಾಟಕ ಮಾಡುತ್ತಿದ್ದಾರೆ, ಇಂದಿರಾ ಗಾಂಧಿ ಪ್ರಧಾನಿಗಳಾಗಿದ್ದಾಗಲೇ ಪ್ರತಿಯೊಬ್ಬರಿಗೂ ನಿವೇಶನ ನೀಡಿದ್ದರು, ದೇವರಾಜ್ ಅರಸು ಕೊಳಚೆ ನಿಮರ್ೂಲನಾ ಮಂಡಳಿ ಸ್ಥಾಪಿಸಿದ್ದರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸಕರ್ಾರ ಕೊಳಚೆ ಪ್ರದೇಶದ ಜನರಿಗೆ 10,000 ಲೀ ಉಚಿತ ಕುಡಿಯುವ ನೀರು ನೀಡುತ್ತಿದೆ, ಬಾಕಿಯಿದ್ದ ಬಿಲ್ಗಳ ವಜಾ ಮಾಡಿದೆ, ಹಿಂದಿನ ಯುಪಿಎ ಮತ್ತು ಈಗಿನ ರಾಜ್ಯ ಕಾಂಗ್ರೇಸ್ ಸಕರ್ಾರದ ಸಾಕಷ್ಟು ಯೋಜನೆಗಳಿಂದ ಸ್ಲಮ್ಗಳು ಅಭಿವೃದ್ಧಿ ಕಂಡಿವೆ, ಕೇವಲ ಒಂದು ರಾತ್ರಿ ಮಲಗೆದ್ದರೆ ಸಮಸ್ಯೆ ಬಗೆ ಹರಿಯದು ಎಂದರು.
ಇಂದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ಸ್ವತಂತ್ರ ಅಭ್ಯಥರ್ಿಯಾಗಿ ಜಯಸಿದ್ದ ಮಾರತ್ತಹಳ್ಳಿ ವಾಡರ್್ ಪಾಲಿಕೆ ಸದಸ್ಯ ಎನ್.ರಮೇಶ್ ಬಿಬಿಎಂಪಿ ಯಲ್ಲಿ ಕಾಂಗ್ರೇಸ್ಗೆ ಬೆಂಬಲ ನೀಡಿದ್ದರು, ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಮುಂದಿನ ವಿಧಾನ ಸಭೆ, ಲೋಕ ಸಭೆ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚು ಬಲ ತುಂಬುವ ವಿಶ್ವಾಸವಿದೆ, ಹಿಂದಿನ ವಿಧಾನ ಸಭೆ ಚುನಾವಣೆಯಲ್ಲಿ ಎ.ಸಿ.ಶ್ರೀನಿವಾಸ್ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡರೂ ಕ್ಷೇತ್ರದ ಜನರ ನಡುವೆ ಇದ್ದು ಸಮಸ್ಯೆಗಳನ್ನು ಅರಿತಿದ್ದಾರೆ, ಕ್ಷೇತ್ರದ ಮತದಾರರು ಕಾಂಗ್ರೇಸ್ ಅಭ್ಯಥರ್ಿಗೆ ಮತ ನೀಡಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಬಿಬಿಎಂಪಿ ಲೆಕ್ಕ ಪತ್ರ ಸ್ಥಾಯಿ ಸಮಿತ ಅಧ್ಯಕ್ಷ  ರಮೇಶ್, 10 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಪ್ರಾಮಾಣಿಕ ಸೇವೆಸಲ್ಲಿಸಿದ್ದರೂ ಸಹ ನನ್ನ ಶ್ರಮ ಗುರುತಿಸದೆ ಹೀಯಾಳಿಸಿದ್ದರು, ಪಾಲಿಕೆ ಸದಸ್ಯನ ಸ್ಥಾನಕ್ಕೆ ಸ್ಪಧರ್ಿಸಲು ಅವಕಾಶ ಮಾಡಿಕೊಡಲಿಲ್ಲ ಪಕ್ಷೇತರನಾಗಿ ಸ್ಫಧರ್ಿಸಿದಾಗ ನನ್ನ ಸೇವೆ ಮನಗಂಡ ಜನರು ಸದಸ್ಯನನ್ನಾಗಿ ಮಾಡಿದರು, ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಲೆಕ್ಕ ಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಹ ನೀಡಿ ಮಾತು ಕೊಟ್ಟಂತೆ ನಡೆದರು, ಎ.ಸಿ.ಶ್ರೀನಿವಾಸ್ ಕ್ಷೇತ್ರದ ಸಮಸ್ಯೆಗಳನ್ನು ಅರಿತಿದ್ದಾರೆ ಬಡವರ ಪರ ಅವರ ಕಾಳಜಿಗೆ ಶಕ್ತಿ ತುಂಬಲು ಕಾಂಗ್ರೇಸ್ಗೆ ಸೇರ್ಪಡೆಗೊಂಡಿದ್ದು, ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಪ್ರತಿನಿಧಿಯಾಗಿ ಆಯ್ದು ಕಳಿಸಲು ಶ್ರಮಿಸುತ್ತೇನೆಂದು ತಿಳಿಸಿದ್ದಾರೆ.
ಇದೆ ವೇಳೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಪಾಲಿಕೆ ಸದಸ್ಯ ರಮೇಶ್ ಹಾಗೂ ಲೋಕೇಶ್ ಸೇರಿದಂತೆ ನೂರಾರು ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯ ಕೆ.ಸಿ.ರಾಮಮೂತರ್ಿ, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಪಾಲಿಕೆ ಸದಸ್ಯರಾದ ಎ.ಸಿ.ಹರಿಪ್ರಸಾದ್, ಉದಯ್ ಕುಮಾರ್, ನಿತಿನ್ ಪುರುಷೋತ್ತಮ್, ವತರ್ೂರು ಬ್ಲಾಕ್ ಅಧ್ಯಕ್ಷ ಜಯರಾಮ್ ಜಿಲ್ಲಾ ಪಂ.ಸದಸ್ಯ ಕೆಂಪರಾಜ್, ಜಿಲ್ಲಾಧ್ಯಕ್ಷ ಶೇಖರ್, ಮುಖಂಡರಾದ ಗುಂಜೂರು ಪಾಳ್ಯ ರಾಮಕೃಷ್ಣಪ್ಪ, ಜಗದೀಶ್ ರೆಡ್ಡಿ ಸೇರಿದಂತೆ ಮತ್ತಿತರರಿದ್ದರು.