ಅವಳಿ ಕರುಗಳ ಜನನ..

233

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ :ತಾಲೂಕಿನ ಮಾಡೇಶ್ವರ ಗ್ರಾಮದ ಶಾನುಭೋಗರ ರಾಮಮೂರ್ತಿ ಎಂಬುವರ ಜರಸಿ ಜಾತಿಗೆ ಸೇರಿದ ಹಸುವೊಂದು ಎರಡನೇ ಸೂಲಿನಲ್ಲಿ ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ. ಶಿವರಾತ್ರಿ ಪುಣ್ಯದಿನದಂದು ಕರುಗಳ ಜನಿಸಿರುವುದರಿಂದ ಇವುಗಳಿಗೆ ಗಂಗೆ-ಗೌರಿ ಎಂದು ಹೆಸರಿಡಲಾಗಿದೆ.ಅಪರೂಪದ ಹಸು ಮತ್ತು ಕರುಗಳನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡಿ ಆಶ್ಚರ್ಯ ಚಕಿತರಾಗಿದ್ದಾರೆ.