ಸಂತ ಶ್ರೀ ಸೇವಾಲಾಲ್ ಜಯಂತಿ

527

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : 12ನೇ ಶತಮಾನದ ದಲಿತ ವಚನಾಕಾರರ ಆದರ್ಶಗಳು ಮತ್ತು ಅವರು ಸಮ ಸಮಾಜದ ಒಳಿತಿಗಾಗಿ ಶ್ರಮಿಸಿದ ಸಾಧನೆಗಳು ಅರ್ಥಮಾಡಿಕೊಂಡು ಈಗಿನ ಯುವ ಪೀಳಿಗೆ ಮತ್ತು
ಜನಸಾಮಾನ್ಯರು ಬದುಕಬೇಕಾಗಿದೆ ಎಂದು ಶಾಸಕ ಎಂ. ರಾಜಣ್ಣ ತಿಳಿಸಿದರು.

ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ದಲಿತ ವಚನಾಕಾರರ ಜಯಂತಿ ಮತ್ತು ಸಂತ ಶ್ರೀ ಸೇವಾಲಾಲ್ ಜಯಂತಿಯಲ್ಲಿ ಪಿಂಡಿಪಾಪನಹಳ್ಳಿ ನಾಡೋಜ ಪ್ರಶಸ್ತಿ ಪುರಸ್ಕೃತರಾದ ಮುನಿವೆಂಕಟಪ್ಪ, ಕವಿಗಳು ಮತ್ತು ಉಪನ್ಯಾಸಕರಾದ ಅರಿಕೆರೆ ಮುನಿರಾಜು, ವರದನಾಯಕನಹಳ್ಳಿ ಕವಿಗಳು ಮತ್ತು ಜನಪದ ಕಲಾವಿದ ಈ ಧರೆ ಪ್ರಕಾಶ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ, ನಗರಸಭೆ ಪ್ರಭಾರಿ ಅದ್ಯಕ್ಷೆ ಪ್ರಭಾವತಿ ಸುರೇಶ್, ಬಿಇಒ ಚಂದ್ರಶೇಖರ ಬಾಬು, ಇಒ ವೆಂಕಟೇಶ್, ದಸಂಸ ತಾಲ್ಲೂಕು ಅದ್ಯಕ್ಷ ವೆಂಕಟೇಶ್ ಹಾಗೂ ಮುಂತಾದವರು ಭಾಗವಹಿಸಿದ್ದರು.