ತಲಾಕ್ ಹೆಸರಲ್ಲಿ ಬ್ಲಾಕ್ ಮೇಲ್…

190

ಬೆಂಗಳೂರು/ಕೆಆರ್.ಪುರ:- ತ್ರಿವಳಿ ತಲಾಕ್ ಗೆ ಕೇಂದ್ರ ಸರ್ಕಾರ ಎಳ್ಳು ನೀರು ಬಿಟ್ಟಿದೆ.ತಲಾಕ್ ರದ್ದಾಗಿದ್ರು ಕೆಲ ಮುಸ್ಲಿಂರು ತಲಾಕ್ ಹೆಸರಲ್ಲಿ ಪತ್ನಿಯರಿಗೆ ಬ್ಲಾಕ್ ಮೇಲ್ ಮಾಡಿ ಪೇಚಿಗೆ ಸಿಲುಕುತ್ತಿದ್ದಾರೆ.ಅಷ್ಟಕ್ಕೂ ತಲಾಕ್ ತರ್ಲೆ ನಡೆದಿರೊದು ಎಲ್ಲಿ ಅಂತ ಹೇಳ್ತಿವಿ ಈ ಸ್ಟೋರಿ ನೋಡಿ.
ತಲಾಕ್ ನೀಡುವುದಾಗಿ ದಮ್ಕಿಹಾಕ್ತಿದ್ದ ಪತಿ ವಿರುದ್ದ ಕೇಸ್ .
ತ್ರಿವಳಿ ತಲಾಕ್ ಮಾನ್ಯತೆ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕಾನೂನಿನ ಅರಿವಿಲ್ಲದ ಮಹಾನ್ ಬಾವನೊಬ್ಬ ತಲಾಕ್ ನೀಡುವುದಾಗಿ ಪತ್ನಿಗೆ ಬ್ಲಾಕ್ ಮೇಲ್ ಮಾಡಿತ್ತಿದ್ದ .ಪತಿಯ ಬ್ಲಾಕ್ ಮೇಲ್ ತಂತ್ರಕ್ಕೆ ಪತ್ನಿ ಪ್ರತಿತಂತ್ರವನ್ನ ಎಣೆದ್ದಿದ್ದಾಳೆ.
ಶಬ್ನಂ ಮತ್ತು ರಿಯಾಜ್ ಮದುವೆಯಾಗಿ ಹತ್ರ ಹತ್ರ ೨೦ ವರ್ಷವಾಗಿದೆ.ಇವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಪತಿರಾಯ ಮಾತ್ರ ಪತ್ನಿಗೆ ವರದಕ್ಷಿಣೆ ತರುವಂತೆ ಪಡಿಸುತ್ತಿದ್ದ. ವರದಕ್ಷಿಣೆ ತರದೇ ಹೋದ್ರೆ ತಲಾಖ್ ಕೋಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ.ಪತ್ನಿ ಶಬ್ನಂ ಮೋದಿ ಅಸ್ತ್ರ ಬಳಿಸಿ ಪತಿಯ ಬಾಯಿ ಮುಚ್ಚಿ ಸಿದ್ದಾಳೆ.

ಬೈಟ್ _ಶಬ್ನಂ ನೊಂದ ಮಹಿಳೆ

ವರದಕ್ಷಿಣೆ ತರ್ಬೇಕು ಇಲ್ಲದೇ ಹೋದ್ರೆ ತ್ರಿವಳಿ ತಲಾಕ್ ಕೋಡುವುದಾಗಿ ರೋದನೆ ಇಡುತ್ತಿದ್ದ ಪತಿ ರಿಯಾಜ್ ವಿರುದ್ದ ಪತ್ನಿ ಶಬ್ನಂ ಕೆ.ಆರ್ . ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಕಾನೂನಿನ ಪ್ರಕಾರ ತ್ರಿವಳಿ ತಲಾಕ್ ನಿಷೇದಿಸಿರುವುದರಿಂದ ಪತಿ ರಿಯಾಜ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಒಟ್ನಲ್ಲಿ ಸುಮ್ನೆ ಇರ್ಲಾದೆ ಇರುವೆ ಬಿಟ್ಕೊಂಡ್ರು ಅನ್ನೊ ಹಾಗೇ ತಲಾಕ್ ನೀಡುವುದಾಗಿ ಪತ್ನಿ ಗೆ ಬೆದರಿಸಿ ಪತಿ ಸಂಕಷ್ಟಕ್ಕೆ ಸಿಲುಕಿರುವುದು ಮಾತ್ರ ದುರಂತವೇ ಸರಿ.