ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ….

208

ಮಂಡ್ಯ/ಮಳವಳ್ಳಿ: ಮಕ್ಕಳು ಉತ್ತಮ‌ಶಿಕ್ಷಣ ಪಡೆದ ಮಾತ್ರ ದೇಶಪಗ್ರತಿಸಾಧ್ಯ ಮಕ್ಕಳಿಂದ ದೇಶಾಭಿವೃದ್ದಿ ಯಾಗುವುದು ಅವರನ್ನು ಉತ್ತಮ ಪ್ರಜೆಯಾಗಿ ಬೆಳೆಸಿ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಶ್ರೀಮತಿ ಗೌರಮ್ಮ ಎಂ.ವಿ ವೆಂಕಟಪ್ಪ ಸೇವಾ ಟ್ರಸ್ಟ್ ನ ಜ್ಞಾನಧಾರ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ನಡೆದ ಶಾಲಾ ವಾಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಸಮಾಜ ನಿರ್ವಹಣೆ ಬಗ್ಗೆ ಪೋಷಕರು ಕಾಳಜಿ ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಯಮದೂರುಸಿದ್ದರಾಜು ಮಾತನಾಡಿ, ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ನಮ್ಮ ಶಾಲೆಗೆ ಕೀರ್ತಿ ತನ್ನಿ , ಶಾಲೆಯಲ್ಲಿ ಲೋಪವಿದ್ದರೆ ತಿಳಿಸಿ ತಿದ್ದಿಕೊಳ್ಳುತ್ತೇವೆ ಎಂದು ಪೋಷಕರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮ ದಲ್ಲಿ ಮೈಸೂರು ಬೌದ್ದ ಬಿಕ್ಷ ಕಲ್ಯಾಣ ಸಿರಿ ಬಂತೇಜೀ, ಚೇತನಕುಮಾರ್, ಡಾ.ಸುರೇಶ್. ಸುಜಾತ, ಸೇರಿದಂತೆ ಮತ್ತಿತ್ತರರು ಇದ್ದರು