ಕೊಂಡದಲ್ಲಿ ಬಿದ್ದ ಅರ್ಚಕ .

198

ಮಂಡ್ಯ/ಮಳವಳ್ಳಿ: ಕೊಂಡ ಹಾಯುವ ವೇಳೆ ಕೊಂಡಕ್ಕೆ ಬಿದ್ದ ಅರ್ಚಕನಿಗೆ ತೀವ್ರಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ, ದಳವಾಯಿಕೋಡಿಹಳ್ಳಿ ಗ್ರಾಮದಲ್ಲಿನಡೆದಿದೆ.
ಗ್ರಾಮದ ಶಿವಸ್ವಾಮಿ (೫೫) ಕೊಂಡಕ್ಕೆ ಬಿದ್ದ ಅರ್ಚಕನಾಗಿದ್ದು.ಮುಂಜಾನೆ ೫ ಗಂಟೆಗೆ ಸಂಭವಿಸಿದ ಅವಘಡ ಸಂಭವಿಸಿದ್ದು,
ಇಂದು ಗ್ರಾಮದಲ್ಲಿ ಬಸವೇಶ್ವರ ದೇವರ ಕೊಂಡೋತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಕೈಯಲ್ಲಿ ವೀರಭದ್ರದೇವರ ವಿಗ್ರಹ ಹಿಡಿದು ಕೊಂಡ ಹಾಯುತ್ತಿದ್ದ ಅರ್ಚಕ. ಕೊಂಡ ಹಾಯುವಾಗ ಆಯತಪ್ಪಿ ಕೊಂಡಕ್ಕೆ ಬಿದ್ದ ಅರ್ಚಕನಿಗೆ ಎರಡು ಮಂಡಿಗೆ ಹಾಗೂ ಕೈಗಳಿಗೆ ಗಾಯವಾಗಿರುತ್ತದೆ. ದೇವರ ಹರಕೆಯನ್ನು ಕೈ ಬಿಡದೆ .ಕೊಂಡದಲ್ಲಿ ಬಿದ್ದರೂ ಮತ್ತೆ ಎದ್ದು ಕೊಂಡ ಹಾಯ್ದು ದೇವರ ಸೇವೆ ಮುಗಿಸಿ ನಂತರ

ಕೊಂಡದಲ್ಲಿ ಬಿದ್ದ ಪರಿಣಾಮ ಅರ್ಚಕನ ಕಾಲು ಮತ್ತು ಎದೆಯ ಭಾಗಕ್ಕೆ ಗಾಯವಾಗಿದ್ದ ಅರ್ಚಕ ಶಿವಸ್ವಾಮಿ ರವರಿಗೆ ಮೈಸೂರು ಆಸ್ಪತ್ರೆಗೆ ರವಾನೆ.ಮಾಡಲಾಗಿದೆ. ಈ ಸಂಬಂದ ಹಲಗೂರುಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲುಮಾಡಿಕೊಂಡಿದ್ದಾರೆ