ನಗರ ಸಭೆಯ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ.

196

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವಾರ್ಡ್ ನಂ 14 ಸೊಣ್ಣಶೆಟ್ಟಿಹಳ್ಳಿ ಯಲ್ಲಿರುವ ಸತ್ತೊರ್ ಸಾಬ್ ರವರ ಬೀದಿಯಲ್ಲಿ ಆರು ತಿಂಗಳಾದರು ಸ್ವಚ್ಛತೆ ಮಾಡಕ್ಕೆ ಮುಖಾನೆ ಮಾಡದ ನಗರ ಸಭೆಯ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮೂರು ಟಿವಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅತಿಕ್ ಅಹಮದ್ ರವರು ನಗರಸಭೆ ಅಧಿಕಾರಿಗಳು ನಮ್ಮ ಬೀದಿಯ ಕಡೆ ಗಮನಹರಿಸುವುದಿಲ್ಲ ನಾವು ಕಛೇರಿಗೆ ಹೋಗಿ ಅವರಿಗೆ ಮಾಹಿತಿ ನೀಡಿದರೆ ಮಾತ್ರ ಒಂದು ದಿನ ಬಂದು ಕ್ಲೀನ್ ಮಾಡುತ್ತಾರೆ. ನಂತರ ಇತ್ತ ಕಡೆ ಗಮನಹರಿಸುವುದಿಲ್ಲ ಕುಡಿಯುವ ನೀರಿನ ಪೈಪ್ ನಲ್ಲಿ ಚರಂಡಿ ನೀರು ಬರುತ್ತದೆ. ಮತ್ತು ಚಿಂತಾಮಣಿ ನಗರದ ಎಲ್ಲಾ ಕಡೆ ಸಿ ಸಿ ರಸ್ತೆ ಹಾಕಲಾಗಿದೆ ಆದರೆ ನಮ್ಮ ವಾರ್ಡಿನ ಸದಸ್ಯ ಚುನಾವಣೆಯ ಸಂದರ್ಭದಲ್ಲಿ ಬಂದು ಹೋಗಿರುವುದು ನಂತರ ಆವರು ಸಹ ಈ ಕಡೆ ಮುಖಾನೆ ಮಾಡಿಲ್ಲ ಅಂತಾರೆ ಸಾರ್ವಜನಿಕರು.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ವಾರ್ಡ್ ಕಡೆ ಗಮನಹರಿಸಬೇಕೆಂದು ಮನವಿ ಮಾಡಿದರು .

ಈ ಬೀದಿಯಲ್ಲಿ ಸುಮಾರು ಜನ ಕಾಯಿಲೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಾಂದ್ ಪಾಷ .ತಬ್ರೇಜ್ , ಜಮೀಲ್ , ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.