ಶಾಸಕರಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ..

452

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದಲ್ಲಿ ಮತ್ತು ಗ್ರಾಮಗಳಲ್ಲಿ ಶಾಸಕರಾದ ಜೆ.ಕೆ.ಕೃಷ್ಣಾ ರೆಡ್ಡಿ ರವರು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಚಿಂತಾಮಣಿ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮತ್ತು ಪದವಿ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾಭ್ಯಾಸದ ಕೊಠಡಿ ಮತ್ತು ಕಂಪ್ಯೂಟರ್ ಲ್ಯಾಬ್ , ಮತ್ತು 2017 -18 ನೇ ಸಾಲಿನ ಜಿಲ್ಲಾ ಪಂಚಾಯತ್ ಲಿಂಕ್ ಡಾಕ್ಯುಮೆಂಟ್ ನಲ್ಲಿ ಲೆಕ್ಕೆಶೀರ್ಷಿಕ ಯೋಜನೆಯಲ್ಲಿ ನಗರದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಸರ್ಕಾರಿ ಯುನಾನಿ ಚಿಕಿತ್ಸೆಲಯ ಕಟ್ಟಡದ ಹಾಗೂ ವಿವಿಧ ಗ್ರಾಮದಲ್ಲಿ ಸುಮಾರು 280.30 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅದ್ಯಕ್ಷೆ ಸುಜಾತ ಶಿವಣ್ಣ ,ಮಾಜಿ ನಗರಸಭಾ ಅಧ್ಯಕ್ಷ ಅನ್ವರ್ ,ನಗರಸಭೆ ಸದಸ್ಯರಾದ ಪ್ರಕಾಶ್ ,ಮುಖಂಡರಾದ ಮಂಜುನಾಥ ಚಾರಿ ,ಸಿ.ಕೆ ಶಬೀರ್ ,ಟಾಮಾಟ ಗೌಸ ,ವೇಣು ಮುಂತಾದವರು ಉಪಸ್ಥಿತಿಯಿದರು.