ರಸ್ತೆ ಅಭಿವೃದ್ದಿಗೆ ಶಾಸಕರಿಂದ ಚಾಲನೆ…

209

ಬೆಂಗಳೂರು/ಕೆ.ಆರ್.ಪುರ:- ಸುಮಾರು 5.5 ಕೋಟಿ ರೂಗಳಲ್ಲಿ ಕಲ್ಕೆರೆ ಗ್ರಾಮದ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.
ರಾಮಮೂರ್ತಿ ನಗರ ವಾರ್ಡ್ ಕಲ್ಕೆರೆ ಗ್ರಾಮದ ಕಾನೆ ರಸ್ತೆ ಅಭಿವೃದ್ದಿ ಹಾಗೂ ಸರ್ಕಾರಿ ಶಾಲಾ ಅಭಿವೃದ್ದಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸುಮಾರು ವರ್ಷಗಳಿವಂದ ನೆನೆಗುದಿಗೆ ಬಿದ್ದಿದ್ದ ಕಲ್ಕೆರೆ ಕಾನೆ ರಸ್ತೆಯನ್ನು ಅಭಿವೃದ್ದಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ಸುಮಾರು 175 ಲಕ್ಷ ರೂ ಗಳಲ್ಲಿ ಸುಮಾರು 850 ಮೀಟರ್ ರಸ್ತೆ ಹಾಗು ಚರಂಡಿ ಕಾಮಗಾಗಿ ಅಭಿವೃದ್ದಿಪಡಿಸಲಾಗುವುದೆಂದರು. ಈ ಭಾಗದ ರಸ್ತೆ ರೈತರಿಗೆ ಕೃಷಿ ಕೆಲಸಗಳಿಗೆ ತೊಡಗಿಸಿಕೊಳ್ಳಲು ಅನುಕೂಲವಾಗಿದ್ದು ಈ ಕಾಮಗಾರಿ ಮಾಡಲಾಗುವುದು ಎಂದರು. ಕಲ್ಕೆರೆ ಗ್ರಾಮದ ಮುಖ್ಯ ರಸ್ತೆಗಳ ಅಭಿವೃದ್ದಿ ಪೂರ್ಣಗೊಳಿಸಲಾಗಿದೆ ಎಂದರು. ಕಲ್ಕೆರೆ ಗ್ರಾಮದ ಸಕರ್ಾರಿ ಶಾಲೆಯನ್ನು ನೂತನ ಶೈಲಿಯಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುವುದೆಂದರು. ಈ ಭಾಗದ ಯಾವುದೆ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದಂತೆ ಈ ಕಟ್ಟಡವನ್ನು ಅಭಿವೃದ್ದಿ ಪಡಿಸಲಾಗುವುದೆಂದು ಅವರು ತಿಳಿಸಿದರು.
ಈ ಸಂದರ್ಬದಲ್ಲಿ ಕೆ.ಮಾದೇಶ್, ವಾಡರ್್ ಅಧ್ಯಕ್ಷ ಮಧುಗೌಡ, ಹಾಗೂ ಕಲ್ಕೆರೆ ಗ್ರಾಮದ ಮುಖಂಡರು ಹಾಜರಿದ್ದರು.