ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ…

185

ಮಂಡ್ಯ/ಮಳವಳ್ಳಿ: ಬಯೋಮೆಟ್ರಿಕ್ ಪದ್ದತಿ ಕೈ ಬಿಟ್ಟುಸಮರ್ಪಕ ರೇಷನ್ ವಿತರಣೆ ಮಾಡಬೇಕು, ಸಂದ್ಯಾ ಸುರಕ್ಷಾ , ವಿಧವಾ ವೇತನ, ವೃದ್ದಾಪ್ಯ ವೇತನ ,ಮನಸ್ವಿನಿ ಯೋಜನೆಗಳ ಮಾಸಾಶನ ವನ್ನು ಕನಿಷ್ಟ ಒಂದು ಸಾವಿರ ರೂಗೆ ಹೆಚ್ಚಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ವಾರ್ಷಿಕ ಶೇ4 ರ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ) ಹಾಗೂ ವಿವಿದ ಸಂಘಟನೆಗಳಿಂದ ಮಳವಳ್ಳಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸರ್ಕಾರಗಳ ವಿರುದ್ದ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿ ತೆರಳಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ನಂತರ ತಹಸೀಲ್ದಾರ್ ದಿನೇಶ್ ಚಂದ್ರ ರವರಿಗೆ ಮನವಿ ಸಲ್ಲಿಸಿದರು. ಆರೋಗ್ಯ ಇಲಾಖೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ತಾಲ್ಲೂಕು ಪಂಚಾಯತಿ ಸೇರಿದಂತೆ ಎಲ್ಲಾ ಇಲಾಖಾಧಿಕಾರಿಗಳ ಆಗಮಿಸಿ ಸಮಸ್ಯೆಗಳ ಮನವಿ ನೀಡಲಾಯಿತು. ಇದಕ್ಕೆ ಸ್ಥಳದಲ್ಲಿ ಉತ್ತರ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟುಮಾಧು, ರೈತ ಪ್ರಾಂತ ಸಂಘದ ಅಧ್ಯಕ್ಷ ಭರತ್ ರಾಜ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ, ತಿಮ್ಮೇಗೌಡ, ಸುನೀತ.ಸುಜಾತ, ಲಿಂಗರಾಜಮೂರ್ತಿ , ಗುರುಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು