ಮಡಿವಾಳ ರತ್ನ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ..

236

ಬೆಂಗಳೂರು/ಕೆ.ಆರ್.ಪುರ:ಮಡಿವಾಳ ಸಮಾಜ ಅಭಿವೃದ್ಧಿಯಾಗ ಬೇಕೆಂದರೆ ಎಲ್ಲರೂ ಒಗ್ಗೂಡಬೇಕು ಎಂದು ಬೆಂಗಳೂರು ಪೂರ್ವ ತಾಲೂಕು ಮಾಚಿ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಕಿವಿಮಾತು ಹೇಳಿದರು.

ಕೆ.ಆರ್ ಪುರದ ಬಸವನಪುರ ಡೋಭಿ ಘಾಟ್, ಮಡಿವಾಳ ರತ್ನ ಪ್ರಶಸ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣಪ್ಪನವರು ಪುರಾತನ ಕಾಲದಿಂದಲೂ ಮೈಲಿಗೆಯಾದ ಬಟ್ಟೆಗಳನ್ನು ಶುದ್ಧೀಕರಿಸಿ ಜನರು ಸ್ವಚ್ಛತೆಯಿಂದಿರಲು ನಾವು ಶ್ರಮಿಸಿದ್ದೇವೆ. ನಮ್ಮ ಜೀವನದಲ್ಲಿ ಇದನ್ನು ಕುಲ ಕಸಬನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಹಿಂದುಳಿದಿದೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ವಾಗಿಯು ಹಿಂದುಳಿದಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗೂಡಿ ಬದುಕಿದರೆ ಮಾತ್ರ ಸಮಾಜದಲ್ಲಿ ಸ್ಥಾನ ಮಾನ ಸಿಗಲು ಸಾಧ್ಯ. ಮಡಿವಾಳ ಬಡ ಕುಟುಂಬದ ಫಲಾನುಭವಿಗಳಿಗೆ ಉಚಿತ ಇಸ್ತ್ರಿ ಪೆಟ್ಟಿಗೆ ವಿತರಿಸಲಾಯಿತು, ಈ ಸಂಧರ್ಭದಲ್ಲಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಹಿರಿಯ ಹಾಗೂ ಕಿರಿಯ ಮುಖಂಡರು ಫಲಾನಭಾವಿಗಳು ಭಾಗವಹಿಸಿದ್ದರು.