ಅಧಿಕಾರಿಗೆ ಅವಾಜ್…

193

ವಿಜಯಪುರ:ಪಟ್ಟಣ ಪಂಚಾಯ್ತಿ ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯ್ತಿಯಲ್ಲಿ ಇಂದು ಸಾಮಾನ್ಯ ಸಭೆ ನಡೆದಿತ್ತು. ಸಭೆಯಲ್ಲಿ ಸದಸ್ಯರು ಅಭಿವೃದ್ಧಿ ವಿಷಯದ ಕುರಿತು ಮಾಹಿತಿ ಕೇಳಿದರೆ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರಗಡೆ ನಡೆದಿದ್ದಾರೆ. ಇದರಿಂದ ಕುಪಿತಗೊಂಡು 5ನೇ ವಾರ್ಡ್ ಸದಸ್ಯೆ ಲತಾ ಕಟ್ಟಿಮನಿಯಿಂದ ಮುಖ್ಯಾಧಿಕಾರಿ ಮಾರುತಿ ಆವಾಜ್ ಹಾಕಿದ್ದಾರೆ. ನನ್ನ ಪ್ರಶ್ನೆಗೆ ಉತ್ತರಿಸದೆ ಹಾಗೆ ಎದ್ದು ಹೋದ್ರೆ ಮುಂದಿನ ಬಾರಿ ನನಗೆ ಸಿಕ್ರೆ ನಿನ್ನ ಕೈ, ಕಾಲು ಮುರೀತಿನಿ ಎಂದು ಸದಸ್ಯೆ ವಾರ್ನಿಂಗ್ ಮಾಡಿದ್ದಾಳೆ. ಅಲ್ಲದೇ, ನಿನ್ನಂಥ ಮೋಸಗಾರ ಹಾಗೂ ದಗಲಬಾಜಿ ಅಧಿಕಾರಿ ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಗೇ ಉಳಿದ ಮಹಿಳಾ ಸದಸ್ಯರಿಬ್ಬರಿಂದ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಇನ್ನು ಸಭೆ ಅರ್ಧಕ್ಕೆ ಮೊಟಕುಗೊಳಿಸಿ ಮುಖ್ಯಾಧಿಕಾರಿ ಮಾರುತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದು ಈ ಗಲಾಟೆ ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ…

ವರದಿ: ನಂದೀಶ ಹಿರೇಮಠ.