ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ..

204

ಬೆಂಗಳೂರು/ಮಹದೇವಪುರ:ಮಹಿಳೆ ಅಂದರೆ ಸಬಳೆ ಅಲ್ಲಾ ಪ್ರಭಳೆ,ಮಹಿಳೆಯರಿಗೆ ಎಲ್ಲಿ ಗೌರವ ನೀಡುತ್ತಾರೊ ಅಲ್ಲಿ ದೇವತೆಗಳು ನೆಲಸಿರುತ್ತಾರೆಂದು ಪುರಾಣಗಳಲ್ಲಿ ಹೇಳಿದ್ದಾರೆ ಎಂದು ವರ್ತೂರು ವಾರ್ಡಿನ ಪಾಲಿಕೆ ಸದಸ್ಯೆ ಪುಷ್ಪಾ ಮಂಜುನಾಥ್ ಹೇಳಿದರು. ಕ್ಷೇತ್ರದ ವರ್ತೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿದ ನಂತರ ಮಾತನಾಡಿದ ಅವರು ಮಹಿಳೆಯರು ಧೈರ್ಯ ಮಾಡಿ ಮುಂದಕ್ಕೆ ಹೋದರೆ ಏನೂ ಬೇಕಾದರೂ ಸಾಧಿಸಬಹುದು, ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದಾರೆ , ರಾಜಕೀಯ, ಶಿಕ್ಷಣ, ಆರಕ್ಷಕ ಠಾಣೆ, ಆರ್ಥಿಕ, ಕಾರ್ಖಾನೆ ಸೇರಿದಂತೆ ಅನೇಕ ರಂಗಗಳಲ್ಲಿ ಮುಂದಿದ್ದವೆಂದು ತಿಳಿಸಿದರು.

ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆಯ ಹಕ್ಕು ಬಂದಿದ್ದರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳು ನಡೆಯುತ್ತಿರುವುದು ತೀವ್ರ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಭಾವತಿ, ಪುಷ್ಪಾ, ಗೀತಾ, ರತ್ನಮ್ಮ, ಉಮಾ ಮುಂತಾದವರು ಹಾಜರಿದ್ದರು.