ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ

222

ತುಮಕೂರು/ಪಾವಗಡ: ನಾಗಲಮಡಿಕೆಯಲ್ಲಿ ಪಾವಗಡದ ವೈ.ಇ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ಧರ್ಜೆ ಕಾಲೇಜು ವತಿಯಿಂದ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯವಾರ್ಷಿಕ ವಿಶೇಷ ಶಿಬಿರವನ್ನು ಪ್ರಾಂಶುಪಾಲರು ಕೆ.ಎನ್.ನಾರಾಯಣ್ ರವರು ಉದ್ಘಾಟನೆ ನೆರವೆರಿಸಿದರು.

ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟನೆ ನೆರವೆರಿಸಿ ಮಾತನಾಡಿದ ಅವರು ಈ ಏಳು ದಿನಗಳ ಕಾಲ ಕಾರ್ಯಕ್ರಮ ನಡೆಯಲ್ಲಿದ್ದು ಶಿಬಿರದಲ್ಲಿ ನಮ್ಮ ಕಾಲೇಜಿನ 83 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿದಿನ ಗ್ರಾಮದಲ್ಲಿ ಸ್ವಚ್ಚತೆ,ನೈಮಲ್ಯ, ಕಾರ್ಯಕ್ರಮ ಮಾಡುವುದರ ಜೊತೆಗೆ ಗ್ರಾಮದ ಜನರಲ್ಲಿ ಸ್ವಚ್ಚತಾಅರಿವು ಮೂಡಿಸುವಾ ಪ್ರಯತ್ನ ವಿದ್ಯಾರ್ಥಿಗಳು
ಮಾಡಲಿದ್ದು,ಜೊತೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ಗಳನ್ನು ಕೂಡ ನಡೆಸಲಾಗುವುದು ಎಂದರು. ಸ್ವಚ್ಚತೆಯಿಂದ ಗ್ರಾಮದಲ್ಲಿ ಹರಡುವಾ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಚನ್ನಮಲ್ಲಪ್ಪ ಮಾತನಾಡಿ ಕಾಲೇಜ್ ವಿದ್ಯಾರ್ಥಿಗಳಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದು ಕೆಲವು ದಿನಗಳಿಗೆ ಮಾತ್ರ ಸೀಮಿತವಾಗದೆ ಇಲ್ಲಿನ ಜನಸಾಮಾನ್ಯರಿಗೆ ಅರಿವು ಮೂಡಿಸುವ ಒಂದು ಜಾಗೃತಿ ಮೂಡಿಸಿವಂತಾಹಿದೆ. ನಮ್ಮ ಮನೆಗಳ ಸುತ್ತಮುತ್ತಲಿರುವಾ ಮಲಿನತೆಯನ್ನು ಸ್ವಚ್ಚ ಮಾಡುವಾ ಮುಖಾಂತರ ಉತ್ತಮ ಪರಿಸರವನ್ನು ಕಾಣುವಾ ಮತ್ತು ನಮ್ಮಗಳ ಆರೋಗ್ಯ ರಕ್ಷಿಸಿ ಕೊಳ್ಳುವ ಪ್ರಯತ್ನ ಇದರಿಂದ ಪ್ರತಿಯೊಬ್ಬರಲ್ಲಿ ಅರಿವು ಮೂಡಿದಾಗ ಮಾತ್ರ ಸ್ವಚ್ಚ ಗ್ರಾಮಗಳನ್ನು ಕಾಣಲು ಸಾದ್ಯ ಎಂದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಟಿ.ಎಸ್.ಅಂಜಿನೇಯ,ನಾಗಮಣಿ,ಮುತ್ಯಾಲಮ್ಮಮುತ್ಯಾಲಪ್ಪ, ಶಿಬಿರಾಧಿಕಾರಿಗಳು ಅಶ್ವತ್,ರವಿ, ವಿದ್ಯಾ, ಉಪನ್ಯಾಸಕರು ವೇದಲಕ್ಷ್ಮಿ, ಕೃಷ್ಣಪ್ಪ, ವೆಂಕಟ ರಮಣಪ್ಪ, ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.