ಕಲಾಸೇವೆಯೊಂದಿಗೆ ಮನರಂಜನೆ

423

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಸಾಮ್ರಾಟ್ ಸುಯೋಧನ (ಶ್ರೀಕೃಷ್ಣ ಸಂಧಾನ) ಎಂಬ ಕನ್ನಡ ಪೌರಾಣಿಕ ನಾಟಕ ಸಿದ್ದಲಿಂಗೇಶ್ವರ ಡ್ರಾಮ ಸೀನರಿಯಲ್ಲಿ ಶಂಕರಾಚಾರಿ ನಿರ್ದೇಶನದ ನಾಟಕ ಚೀಮನಹಳ್ಳಿ ಗ್ರಾಮದಲ್ಲಿ ಶ್ರೀ ರಾಮಾಂಜಿನೇಯ ಕೃಪಾ ಪೋಷಿತ ನಾಟಕ ಮಂಡಳಿ ಹಾಗೂ ಕಸ್ತೂರಿ ಕನ್ನಡ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷದ ಮುಖಂಡ ಮೇಲೂರು ರವಿಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕನ್ನಡ ಪೌರಾಣಿಕ ನಾಟಕಗಳು ಗ್ರಾಮದ ಮುಖಂಡರು ಹಾಗೂ ಕಲಾವಿದರು ಇಂದಿಗೂ ಉಳಿಸುವಂತ ಕೆಲಸ ಮಾಡುತ್ತಿರುವುದು ಶ್ಲಾಂಘನೀಯ ಇಂತಹ ಕಾರ್ಯ ಕ್ರಮಗಳು ಪ್ರತಿ ಗ್ರಾಮದಲ್ಲೂ ಉಳಿಸುವಂತಾಗಬೇಕು ಎಂದರು.

ಮಹಾ ಕಾವ್ಯಗಳು ಪೌರಾಣಿಕ ನಾಟಕಗಳ ಮೂಲಕ ಗ್ರಾಮೀಣ ಭಾಗದಲ್ಲಿ ನಾಟಕಗಳ ಪ್ರದರ್ಶನ ಮೂಲಕ ಉಳಿಸುವ ಜೊತೆಗೆ ಕಲಾಸೇವೆಯ ಮೂಲಕ ಮನರಂಜನೆ ನೀಡುತ್ತಾ ಗಡಿಭಾಗದಲ್ಲಿ ಕನ್ನಡ ಭಾಷೆ ಪೌರಾಣಿಕ ನಾಟಕಗಳನ್ನು ಉಳಿಸುತ್ತಿರುವಕಲಾವಿದರು ಹೆಮ್ಮೆಯ ವಿಚಾರವಾಗಿದೆ ಎಂದು ರಾಜ್ಯ ವಕ್ಕಲಿಗರ ಸಂಘದ ರಾಜ್ಯಾದ್ಯಕ್ಷ ಸತೀಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಚಿಮೂಲ್ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅದ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ ನಾಗರಾಜ್, ರಘು ನಗರಸಭೆ ಮಾಜಿ ಸದಸ್ಯ ಆದಿಲ್ ಪಾಷ, ಕದಿರಿಯುಸೂಪ್, ಚಾನ್ ಪಾಷಾ, ವಕೀಲ ಬಾಸ್ಕರ್, ದೊಣ್ಣಹಳ್ಳಿ ಅಬ್ಲೂಡು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಂತಾದವರು ಭಾಗವಹಿಸಿದ್ದರು.