ಟಿಕೇಟ್ ಗಾಗಿ ತ್ರಿಕೋನ ಸ್ಪರ್ಧೆ.

306

ಕೋಲಾರ/ಬಂಗಾರಪೇಟೆ:2018 ರ ವಿಧಾನಸಭೆ ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಗಾಗಿ ಪ್ರಭಾವಿ ಮೂವರು ಮುಖಂಡರ ಮಧ್ಯೆ ಮೆಗಾ ಪೈಟ್ ನಡೆಯುತ್ತಿದೆ.ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ನರೇಂದ್ರ ರಂಗಪ್ಪ ಮಧ್ಯೆ ಟಿಕೇಟ್ ಪಡೆದುಕೊಳ್ಳಲು ಹರ ಸಾಹಸ ಮಾಡುತ್ತಿದ್ದಾರೆ.

ಎಂ.ನಾರಾಯಣಸ್ವಾಮಿ ನಾಲ್ಕು ಬಾರಿ ಶಾಸಕರಾಗಿ ಗೆದ್ದು, 7 ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದಾರೆ, ಕಳೆದ ಬಾರಿ ಕೋಲಾರ ಲೋಜಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದರು.ಬಿ.ಪಿ.ವೆಂಕಟಮುನಿಯಪ್ಪ ಒಂದು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದು ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರು.ಡಾ‌ನರೇಂದ್ರ ರಂಗಪ್ಪ ಹೊಸ ಮುಖವಾದರೂ ಕ್ಷೇತ್ರದಲ್ಲಿ ಚಿರಪರಿಚಿತರು.
ಈ ಮೂವರು ಮುಖಂಡರ ಮಧ್ಯೆ ಬಿಜೆಪಿ ಟಿಕೇಟ್ ಗೆ ನಡೆಯುತ್ತಿರುವ ಪೇಪೋಟಿಯಲ್ಲಿ ಯಾರಿಗೆ ಟಿಕೇಟ್ ಸಿಗುತ್ತದೆ ಎಂಬ ಕುತೂಹಲ ಉಂಟು ಮಾಡಿದೆ.