ಪಿಎಸೈ ಮೇಲೆ ಚಾಕೂವಿನಿಂದ ಹಲ್ಲೆ..?

205

ವಿಜಯಪುರ/ ಚಡಚಣ:ಅಕ್ರಮ ಪಿಸ್ತೂಲ್ ಸಾಗಾಟ ಶಂಕೆ ಹಿನ್ನಲೆ ಆರೋಪಿ ಹಿಡಿದು ತಪಾಸಣೆ ವೇಳೆ ಪಿಎಸೈ ಮೇಲೆ ಚಾಕೂವಿನಿಂದ ಹಲ್ಲೆ ಮಾಡಿದ ಆರೋಪಿ.
ಪ್ರತಿಯಾಗಿ ಗುಂಡು ಹಾರಿಸಿದ ಚಡಚಣ ಪಿಎಸೈ ಹಳ್ಳೂರ್.ಚಡಚಣ ಪಿಎಸೈ ಗೋಪಾಲ್ ಹಳ್ಳೂರ್ ಮೇಲೆ ಚಾಕೂವಿನಿಂದ ದಾಳಿ ಮಾಡಿದ ಭೀಮಾತೀರದ ಹಂತಕ ಶಶಿ ಮುಂಡೆವಾಡಿ.

ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ‌ ಶಶಿ ಮುಂಡೆವಾಡಿ .ಅಕ್ರಮ‌ ಪಿಸ್ತೂಲ್ ಸಾಗಾಟ ಮಾಡುತ್ತಿದ್ದ ಶಂಕೆಯ ‌ಮೇಲೆ ಶಶಿ ಮುಂಡೆವಾಡಿ ತಪಾಸಣೆ ವೇಳೆ ಘಟನೆ. ಪಿಎಸೈ ಗೋಪಾಲ ಹಳ್ಳೂರ್ ಹಾಗೂ ಓರ್ವ ಪೇದೆ ಮೇಲೆ ಚಾಕೂವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಶಶಿ ಮುಂಡೆವಾಡಿ

ಪಿಎಸೈ ಗೋಪಾಲ್ ಹಳ್ಳೂರ್ ಕೈಗೆ ತಾಗಿದ ಚಾಕೂ, ಪೇದೆಗೂ ಗಾಯ.ನಂತರ ಒಂದು ಸುತ್ತು ಗಾಳಿಯಲ್ಲಿ ಗುಂಡಯ ಹಾರಿಸಿದ ಪಿಎಸೈ ಗೋಪಾಲ್ ಹಳ್ಳೂರ್.ಬಳಿಕ ಶಶಿ‌ ಮುಂಡೆವಾಡಿ ಕಾಲಿಗೆ ಒಂದು ಗುಂಡು ಹಾರಿಸಿದ ಪಿಎಸೈ

ಇಂಡಿ ತಾಲೂಕಿನ ಬರಡೋಲ ಗ್ರಾಮದ ಹೊರ ಭಾಗದಲ್ಲಿ ಘಟನೆ.ಗುಂಡೇಟಿನಿಂದ ಗಾಯಗೊಂಡ ಶಶಿ ಮುಂಡೆವಾಡಿ ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು.ಚಾಕು ಇರತಕ್ಕೆ ಒಳಗಾದ ಪಿಎಸೈ ಹಾಗೂ ಓರ್ವ ಪೇದೆಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ…

ವರದಿ:ನಮ್ಮೂರು ಟಿವಿ ನಂದೀಶ