ಚೆಕ್ ಡ್ಯಾಮ್ ಗಾಗಿ ಭೂಮಿ ಪೂಜೆ..

165

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಎಮ್ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಗುಟ್ಟುಪಾಳ್ಯದ ಬಳಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 25 ಲಕ್ಷ ರೂಪಾಯಿಗಳ ಚೆಕ್ ಡ್ಯಾಮ್ ನಿರ್ಮಾಣಕ್ಕಾಗಿ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ರವರು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು ಒಂದು ತಿಂಗಳ ಒಳ್ಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಮತ್ತು ಸ್ವಚ್ಛವಾಗಿ ಹಾಗೂ ಗುಣಮಟ್ಟವಾಗಿ ಕೂಡಿರಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹಮ್ಮದ್ ಶಫೀಕ್ ಮುಖಂಡರಾದ ವಿಶ್ವನಾಥರೆಡ್ಡಿ ಕಾಪಳ್ಳಿ ವೆಂಕಟರಮಣಪ್ಪ , ಯಾಮರೆಡ್ಡಿ , ಶ್ರೀರಾಮರೆಡ್ಡಿ, ನಾಗ ಸೇರಿದಂತೆ ಗುಟ್ಟುಹಳ್ಳಿ ಗ್ರಾಮಸ್ಥರು ಹಾಗೂ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.