ಜೂಜು ಅಡ್ಡೆ ಮೇಲೆ ಪೋಲಿಸರು ದಾಳಿ..

628

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಗರದ ಹೊರವಲಯದ ಗೋಪಸಂದ್ರ ಬಳಿ ಜೂಜು ಅಡ್ಡೆ ಮೇಲೆ ಗ್ರಾಮಾಂತರ ಪೋಲಿಸರು ದಾಳಿ ನಡೆಸಿ ಮೂರು ಆರೋಪಿಗಳನ್ನು ಬಂಧಿಸಿ ದ್ವಿಚಕ್ರವಾಹನ ಮತ್ತು ರೂ.6,100 ನಗದು ವಶಪಡಿಸಿಕೊಂಡಿದ್ದಾರೆ.

ಜೂಜಾಡುತ್ತಿರುವ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪಿಎಸ್‍ಐ ಜಗದೀಶ್ ರೆಡ್ಡಿ ಯವರ ನೇತೃತ್ವದಲ್ಲಿ ಆಂಜಪ್ಪ, ಜಗದೀಶ್, ಹರೀಶ್, ಸತೀಶ್, ಚಂದ್ರು, ಬಾಬಾಜಾನ್, ನರಸಿಂಹಯ್ಯ, ಮುಕೇಶ್, ಮತ್ತು ಚನ್ನಕೇಶವ ರವರನ್ನೊಳಗೊಂಡ ಸಿಬ್ಬಂದಿ ಜೂಜುಕೋರರ ಮೇಲೆ ಪೋಲಿಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಗೋಪಸಂದ್ರ ಬಳಿ ಇಸ್ಪೀಟ್ ಆಡುತ್ತಿದ್ದ ಗ್ರಾಮದ ವೆಂಕಟರೆಡ್ಡಿ ಬಿನ್ ದೇವಪ್ಪ(45), ವೆಂಕಟರೆಡ್ಡಿ ಬಿನ್ ಲಕ್ಷ್ಮೀರಪ್ಪ(46), ನೇತಾಜಿ ಬಿನ್ ರಾಜಣ್ಣ – ವಿನಾಯಕನಗರ(29), ನಾರಾಯಣಸ್ವಾಮಿ ಬಿನ್ ಈರಪ್ಪ(38) – ಗೋಪಸಂದ್ರ, ಶ್ರೀನಿವಾಸರೆಡ್ಡಿ ಬಿನ್ ಸಿದ್ದಪ್ಪ(45) – ಗೋಪಸಂದ್ರ ಮತ್ತು ಶ್ರೀರಾಮರೆಡ್ಡಿ ಬಿನ್ ಮುನಿಯಪ್ಪ – ಹನುಮಂತನಗರ(38)  ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 3 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.