ಶಿಕ್ಷಕರ ಬೆವರಿಳಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ..

5362

ಬಸವಕಲ್ಯಾಣ: ತಾಲೂಕಿನ ಜಾಫರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರನೆ ಭೇಟಿನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ನಾಗರಾಜ ಅವರು, ಅಲ್ಲಿಯ ವ್ಯವಸ್ಥೆ ಕಂಡು ಕೆಲ ಕಾಲ ದಿಗ್ಭ್ರಮೆಗೊಂಡ ಪ್ರಸಂಗ ಜರುಗಿತು.

ವಿದ್ಯಾಥರ್ಿಗಳ ಕಲಿಕಾ ಮಟ್ಟ ಪರೀಕ್ಷಿಸಲು ನೇರವಾಗಿ ತರಗತಿಗೆ ತೆರಳಿದ ಬಿಇಒ ಅವರು, ಕೆಲ ಮಕ್ಕಳಿಗೆ ಪ್ರಶ್ನೆ ಕೇಳಿ ಉತ್ತರಿಸಲು ಸೂಚಿಸಿದರೆ, ಕೆಲ ಮಕ್ಕಳಿಗೆ ಕನ್ನಡದಲ್ಲಿ ಅವರ ಹೆಸರು, ಶಾಲೆ ಹೆಸರು ಬರಿಯುವಂತೆ ಸೂಚಿಸಿದರು. ಆದರೆ ಮಕ್ಕಳು ಸರಿಯಾಗಿ ಉತ್ತರಿಸದ ಕಾರಣ ಸ್ಥಳದಲ್ಲಿದ್ದ ಶಿಕ್ಷಕರಿಗೆ ತರಾಟೆಗೆ ತಗೆದುಕೊಂಡರು.
ನಂತರ ಶಿಕ್ಷಕರಿಗೂ ಕೆಲ ಪ್ರಶ್ನೆಗಳು ಕೇಳಿದರು, ಆದರೆ ಬಿಇಒ ಅವರ ಪ್ರಶ್ನೆಗಳಿಗೆ ಉತ್ತರಿಸಲು ಶಿಕ್ಷಕರು ಸಹ ವಿಫಲರಾದರು. ಇದರಿಂದ ಆಕ್ರೋಶಗೊಂಡ ಬಿಇಒ ಅವರು, ಶಿಕ್ಷಕರಾದ ನಿಮಗೆ ಸರಿಯಾಗಿ ಕನ್ನಡ ಬರೆಯಲು ಬರಲ್ಲ. ಶಾಲೆ ದಾಖಲೆಗಳಲ್ಲಿ ಬರೆಯಲಾದ ಅಂಕಿ, ಸಂಖೆಗಳು ತಪ್ಪು, ತಪ್ಪಾಗಿವೆ. ಸಾಮಾನ್ಯ ಜ್ಞಾನವು ನಿಮ್ಮಲ್ಲಿ ಕಾಣುತಿಲ್ಲ. ಹೀಗೆಂದಮೇಲೆ ಮಕ್ಕಳಿಗೆ ಏನು ಕಲಿಸುತ್ತಿರಿ ಎಂದು ತರಾಟಗೆ ತಗೆದುಕೊಂಡು ಶಿಕ್ಷಕರ ಬೆವರಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ ಇಲ್ಲ. ಶೌಚಾಲಯವಿದ್ದರು ಬಳಕೆ ಆಗುತಿಲ್ಲ. ಬಿಸಿಯೂಟದಲ್ಲಿ ಸರಿಯಾದ ತರಕಾರಿ ಬಳಕೆ ಮಾಡುತಿಲ್ಲ. ಶಾಲೆಯಲ್ಲಿ ಐವರು ಶಿಕ್ಷಕರಿದ್ದರು ಮಕ್ಕಳ ಕಲಿಕಾ ಮಟ್ಟ ಸುಧಾರಣೆ ಇಲ್ಲ, ಸಕರ್ಾರದ ಸಂಬಳ ಪಡೆಯುವ ನೀವು ಮಾಡುತ್ತಿರುವ ಕೆಲಸವಾದರು ಏನು.? ನಿಮ್ಮ ಮಕ್ಕಳು ಇದೇ ತರಹ ಇದ್ದಾರೇನಾ.? ಎಂದು ಮುಖ್ಯ ಶಿಕ್ಷಕ ನಾಗನಾಥ ಬಾರೋಳ್ಳೆ ಹಾಗೂ ಸ್ಥಳದಲ್ಲಿದ್ದ ಸಹ ಶಿಕ್ಷಕರಿಗೆ ತರಾಟೆಗೆ ತಗೆದುಕೊಂಡರು.
ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಪರಿಶೀಲಿಸಿದ ಬಿಇಒ ಅವರು, 1ರಿಂದ 8ನೇ ತರಗತಿವರೆಗೆ 130 ವಿದ್ಯಾಥರ್ಿಗಳ ದಾಖಲಾತಿ ಇದೆ. ಆದರೆ ಶಾಲೆಯಲ್ಲಿ ಇರೋದು ಕೇವಲ 59 ವಿದ್ಯಾಥರ್ಿಗಳು ಮಾತ್ರ. ಉಳಿದ ಮಕ್ಕಳು ಎಲ್ಲಿ. ಅವರ ಹೆಸರಿನಲ್ಲಿ ಬರುವ ಸಕರ್ಾರಿ ಸೌಲಭ್ಯಗಳು ಯಾರಪಾಲಾಗುತ್ತಿವೆ. ಬಿಸಿಯೂಟದ ದಾಖಲೆಯಲ್ಲಿ 110 ಮಕ್ಕಳ ಹಾಜರಾತಿ ತೊರಿಸಲಾಗಿದೆ ಏಕೆ ಎಂದು ಮುಖ್ಯ ಶಿಕ್ಷಕರನ್ನು ಪ್ರಶ್ನಿಸಿದರು.ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸಕರ್ಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿ, ಕೊಟ್ಯಾಂತರ ರೂ. ವೆಚ್ಚ ಮಾಡುತ್ತಿದೆ. ಸಕರ್ಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕಾದ ಶಿಕ್ಷಕರು, ಮಕ್ಕಳ ಹೆಸರಿನಲ್ಲಿ ಶಾಲೆಗೆ ಬಂದ ಅನುದಾನ ಲೂಟಿ ಮಾಡುವದನ್ನೆ ಮುಖ್ಯ ಕೆಲಸ ಮಾಡಿಕೊಂಡಂತೆ ಕಾಣುತ್ತಿದೆ.ಪ್ರತಿ ತಿಂಗಳಿಗೆ 40 ಸಾವಿರದಷ್ಟು ಸಂಬಳ ಪಡೆಯುವ ನೀವು ಮಕ್ಕಳಿಗೆ ನಾಲ್ಕು ಅಕ್ಷರ ಕಲಿಸಿಲ್ಲ. ನಿಮ್ಮಂಥ ಶಿಕ್ಷಕರಿಂದಾಗಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಇದೇ ತರಹ ವ್ಯವಸ್ಥೆ ಮುಂದುವರೆದರೆ ಅಮಾನತ್ತು ಗೊಳಿಸಲಾಗುವದು ಎಂದು ಎಚ್ಚರಿಸಿದರು.ಬೆಳಗ್ಗೆ 10.30ರ ಸುಮಾರಿಗೆ ಶಾಲೆಗೆ ಅನಿರೀಕ್ಷಿತ ಭೇಟಿನೀಡಿದ ಬಿಇಒ ಅವರು, ಮಧ್ಯಾಹ್ನ 1.30ರ ವರೆಗೆ ಶಾಲೆಯಲ್ಲಿ ಠೀಕಾಣಿ ಹೂಡಿ, ವ್ಯವಸ್ಥೆ ಪರಿಶೀಸಿದರು. ಶಾಲೆ ಅನುದಾನ ದುರುಪಯೋಗ, ಶೈಕ್ಷಣಿಕ ಮಟ್ಟ ಪ್ರಗತಿಯಲ್ಲಿ ಕುಂಠಿತ ಸೇರಿದಂತೆ ಕೆಲ ವಿಷಯಗಳನ್ನು ದಾಖಲಿಸಿಕೊಂಡ ಬಿಇಒ ಅವರು, ಇಲ್ಲಿಯ ಮುಖ್ಯ ಶಿಕ್ಷಕರು ಸೇರಿದಂತೆ ಇತರ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.