ವಿವಿದ ಅಭಿವೃದ್ದಿ ಕಾಮಗಾರಿಗಳಿಗೆ ಸಿ.ಎಂ ಚಾಲನೆ

245

ಬೆಂಗಳೂರು (ಹೊಸಕೋಟೆ): ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಕನಕ ಭವನ ಮತ್ತು ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬುಧವಾರ ಉದ್ಘಾಟನೆ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ 20 ಕೋಟಿ ರಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಬೇಕಾಗಿರುವ ಬಸ್ ಟರ್‍ಮಿನಲ್ಲ್‍ಗೆ ಶಂಕುಸ್ಥಾಪನೆ, ಹಾಗು ನೂತನವಾಗಿ ನಿರ್ಮಾಣಗೊಂಡಿರುವ ಕನಕಭವನ, ಹಾಗೂ ಕಣ್ಣೂರಹಳ್ಳಿ ಸರ್ಕಲ್ ಬಳಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣನವರ ಪತ್ರಿಮೆಯನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು ಬಹುದಿನಗಳ ಕನಸು ಈ ಹೊಸಕೋಟೆಯಲ್ಲಿ ಬಸ್ ನಿಲ್ದಾಣ ಮಾಡಬೇಕುಂಬುದು ಆದರೆ ಈಗ ಬಸ್ ನಿಲ್ದಾಣದ ಜೊತೆಗೆ ಬೃಹತ್ ಟರ್‍ಮಿನಲ್ ನಿರ್ಮಾಣವಾಗುತ್ತಿದ್ದು ಒಂದು ವರ್ಷದೊಳಗಡೆ ಕಾಮಗಾರಿ ಮುಗಿಯಬೇಕು ನಾನು ಸಿಎಂ ಆಗಿದ್ದಾಗಲೇ ನಾನೇ ಈ ಬಸ್‍ಟರ್‍ರ್ಮಿನಲ್ಲ್ ಉದ್ಘಾಟನೆ ಮಾಡಬೇಕು ಎಂದರು, ಹಾಗು ಈ ತಾಲ್ಲೂಕಿನಲ್ಲಿ ಬಹಳ ಅಭಿವೃದ್ದಿ ಆಗಿದೆ ಇದಕ್ಕೆಲ್ಲಾ ಶಾಸಕ ನಾಗರಾಜು ಕಾರಣ ಇವರು ಪ್ರಮಾಣಿಕರಾಗಿ ಕೆಲಸಮಾಡುತ್ತಾರೆ , ಇಲ್ಲಿನ ಜನ ಉತ್ತಮ ಶಾಸಕರನ್ನೇ ಆಯ್ಕೆಮಾಡಿದ್ದಾರೆ ಇದೇ ಬಾಗದಲ್ಲಿ ಕಳೆದ 30 ವರ್ಷಗಳಿಂದ ಮಂತ್ರಿಗಳಾಗಿ ಶಾಸಕರಾಗಿ ಕೆಲಸಮಾಡಿದವರು ಏನು ಅಭಿವೃದ್ದಿ ಮಾಡಲಿಲ್ಲ ಆದರೆ ಶಾಸಕ ಎಂಟಿಬಿ ನಾಗರಾಜು 280 ಕೋಟಿ ರೂಗಳ ಅನುದಾನದಲ್ಲಿ ಉತ್ತಮ ಕಾಮಗಾರಿಗಳನ್ನು ಮಾಡಿದ್ದಾರೆ ಎಂದರು,
ಇನ್ನು ಇದೇ ಸಂದರ್ಭದಲ್ಲಿ ಸರ್ಕಾರದ ನೂರಾರು ಶಂಕುಸ್ತಾಪನೆಗಳಿಗೆ ಸಿ,ಎಂ, ಸಿದ್ದರಾಮಯ್ಯನವರು ಚಾಲನೆ ನೀಡಿದರು, ಹಾಗು ರಸ್ತೆ ಬದಿಯ ವ್ಯಾಪಾರಿಗಳಿಗೆ ಸಹಾಯ ಧನ, ಬಾಳಂತಿಯರಿಗೆ ಕಿಟ್ಟುಗಳು, ಮೀನುಗಾರಿಕೆ ಇಲಾಖೆಯವರಿಗೆ ಸಹಾಯ ಧನ , ಕೃಷಿ ಕಾರ್ಮಿಕರಿಗೆ ಸಬ್‍ಸೀಡಿ ದರದಲ್ಲಿ ಟ್ರಾಕ್ಟರ್ ವಿತರಣೆ ಮಾಡಿದರು. ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಡೀ ರಾಷ್ರ್ಟದಲ್ಲಿ ಅತ್ಯಂದ ದೊಡ್ಡ ಸಂಸ್ತೆ ನಮ್ಮ ಸಾರಿಗೆ ಸಂಸ್ಥೆ ಪ್ರತಿ ದಿನ 52 ಲಕ್ಷ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವ ಕೆಲಸ ಮಾಡುತ್ತಿದೆ, ಇವತ್ತು ಈ ಸಂಸ್ತೆ ಸುಮಾರಿ 1.5 ಎಕರೆ ಪ್ರದೇಶದಲ್ಲಿ ಈ ಬೃಹತ್ ಬಸ್ ಟರ್‍ಮಿನಲ್ ಕಾಮಗಾರಿ ನಡೆಯುತ್ತಿದ್ದೆ ಇದು ಕೇವಲ ಬಸ್ ನಿಲ್ದಾಣವಲ್ಲ ಇದು ದೊಡ್ಡ ಮಟ್ಟದ ಬಸ್ ಟರ್‍ಮಿನಲ್ ಎಂದರು.  ನಂತರ ಮಾತನಾಡಿದ ಶಾಸಕ ಎಂಟಿಬಿ ನಾಗರಾಜು ಸುಮಾರು 63 ಕೋಟಿ ರೂಗಳ ಅನುದಾನದ ಅಡಿಯಲ್ಲಿ ಇವತ್ತು ವಿವಿದ ಕಾಮಗಾರಿಗಳಿಗೆ ಉದ್ಘಾಟನೆ ಮಾಡಲಾಗಿದೆ ಇದು ಬಹುದಿನಗಳ ಕನಸಾಗಿದ್ದು ಈಗ ಸಾರ್ವಜನಿಕರ ಅನುಕೂಲಕ್ಕಾಗಿ ಮಾನ್ಯ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ನೆರವೇರಿದ್ದು ಬಹಳ ಕುಷಿ ತಂದಿದೆ ಎಂದರು,
ನಂತರ ಇದೇ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣಬೈರೇಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಸಚಿವ ಹೆಚ್,ಸಿ ಮಹದೇವಪ್ಪ ಮೇಲ್ಮನೆ ಸದಸ್ಯ ರವಿ, ಜಿಲ್ಲಾ ಪಂಚಾಯ್ತಿ ಅದ್ಯಕ್ಷ ವಿ,ಪ್ರಸಾದ್, ಉಪಾದ್ಯಕ್ಷರಾದ ಅಂತಕುಮಾರಿ, ಬಿಎಂಆರ್‍ಡಿ ಅದ್ಯಕ್ಷ ಟಿ,ಕೃಷ್ಣಾರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಮಂಜುನಾಥ್, ರಘುವೀರ್, ನಗರಸಬೆ ಅದ್ಯಕ್ಷ ನಾರಾಯಣಸ್ವಾಮಿ, ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯ ಎಂ.ಎ.ಕೃಷ್ಣಾರೆಡ್ಡಿ, ಹಾಘು ಇತರರಿದ್ದರು,