ಸೇರ್ಪಡೆ ಕಾರ್ಯಕ್ರಮ…

928

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವಾರ್ಡ್ ನಂ 4 ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಆಕಲ ರಾಮಕೃಷ್ಣಪ್ಪ ರವರ ಕುಟುಂಬದವರಾದ ಆಕಲ ಓಬಣ್ಣ , ಆಕಲ ಲಕ್ಷಮಣ್ , ಪ್ರಸಾದ್ , ರಾಜಣ್ಣ, ರವರು ಮಾಜಿ ಶಾಸಕ ಎಂ ಸಿ ಸುಧಾಕರ ರವರ ಬಣಕ್ಕೆ ಸೇರ್ಪಡೆಯಾದರು .

ನಂತರ ಆಕಲ ಲಕ್ಷಮಣ್ ರವರು ಮಾತನಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂ.ಸಿ ಸುಧಾಕರ್ ರವರನ್ನು ಶಾಸಕರಾಗಿ ಮಾಡಬೇಕೆಂಬ ಉದ್ದೇಶದಿಂದ ನಾವು ಸೇರ್ಪಡೆಯಾಗಿದ್ದಿವಿ ಎಂದರು .

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಭಾಸ್ಕರ್, ಇಲಿಯಾಜ್ ಪಾಷ , ಅಬ್ಬಗುಂಡ್ ಶ್ರೀನಿವಾಸಾ ರೆಡ್ಡಿ , ನಾಮ ನಿರ್ದೇಶಕ ನಗರಸಭಾ ಸದಸ್ಯರಾದ ನಿಸಾರ್ ಶಾ, ರತ್ನಮ್ಮ , ಶ್ರೀನಿವಾಸ್ , ಮುನಿಶಾಮರೆಡ್ಡಿ , ವಿಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.