ನೆತ್ತಿಗೊಂದು ಸೂರು ಕಾರ್ಯಕ್ರಮ..

392

ಬೆಂಗಳೂರು/ಕೆ.ಆರ್.ಪುರ:ಬೆಂಗಳೂರು ನಗರ ಅಭಿವೃದ್ದಿ ಹೊಂದಿದಂತೆ ನಿವೇಶನ ರಹಿತ ಬಡವರ ಸಂಖ್ಯೆ ಹೆಚ್ಚುತ್ತಿದ್ದು ಅವರಿಗೆ ವಾಸಿಸಲು ಸ್ವಂತ ನಿವೇಶನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯಾದ್ಯಕ್ಷ ಜಿಗಣಿ ಶಂಕರ್ ತಮ್ಮ ಆಕ್ರೋಶ ವ್ಯೆಕ್ತಪಡಿಸಿದರು.

ಬೆಂಗಳೂರು ಪೂರ್ವ ತಾಲ್ಲುಕು ಕಛೇರಿ ಮುಂದೆ ಕರ್ನಾಟಕ ರಿಪಬ್ಲಿಕನ್ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೆತ್ತಿಗೊಂದು ಸೂರು ಕಾರ್ಯಕ್ರಮದಡಿ ಸಾಂಕೇತಿಕ ದರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವತಂತ್ರ ಬಂದು 71 ವರ್ಷಗಳು ಕಳೆದರೂ ಬಡವರು ವಾಸಿಸಲು ಸ್ವಂತ ನಿವೇಶನಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯದಲ್ಲಿ ಸುಮಾರು ದಲಿತರಿಗೆ ಸ್ವಂತ ನಿವೇಶನ ಇಲ್ಲದಿರುವುದು ದುರಂತವಾಗಿದ್ದು ಕೂಡಲೆ ಸರ್ಕಾರ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ. ಬೆಂಗಳೂರು ಪೂರ್ವ ತಾಲ್ಲುಕಿನಲ್ಲಿ ಹೆಚ್ಚು ಐಟಿ ಬಿಟಿ ಕಂಪನಿಗಳು ತಲೆಎತ್ತಿದ್ದು ಇಲ್ಲಿ ಕೆಲಸ ಹುಡಿಕಿಕೊಂಡು ಜನರು ಬರುತ್ತಿದ್ದು ಸ್ಥಳೀಯವಾಗಿ ವಾಸಮಾಡುವ ಬಡ ದಲಿತರಿಗೆ ಸ್ವಂತ ನಿವೇಶನ ಇಲ್ಲದಂತಾಗಿದೆ. ಸುಮಾರು ಎಕರೆ ಸರ್ಕಾರಿ ಜಾಗ ಖಾಲಿ ಇದ್ದು ಬಡವರಿಗೆ ನಿವೇಶನ ಹಂಚುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಇದರ ವಿಚಾರವಾಗಿ ಬೆಂಗಳೂರು ಪೂರ್ವ ತಾಲ್ಲುಕು ಕಛೇರಿಯಲ್ಲಿ ಮನವಿ ಸಲ್ಲಿಸಿ ಸುಮಾರು ತಿಂಗಳುಗಳಾದರೂ ಸೂಕ್ತ ಕ್ರಮ ಕೈಗೊಳ್ಳದೆ ಅದಿಕಾರಿಗಳು ನಿರ್ಲಕ್ಷ ದೋರಣೆ ಅನುಸರಿಸುತ್ತಿದ್ದಾರೆ. ಕರ್ನಾಟಕ ರಿಪಬ್ಲಿಕನ್ ಸೇನೆ ಬಾಬಾ ಸಾಹೇಬ್ ಡಾ|| ಬಿ>ಆರ್.ಅಂಬೇಡ್ಕರ್ ಮೊಮ್ಮಗ ಆನಂದ್ರಾಜ್ ಅಂಬೇಡ್ಕರ್ ಮುನ್ನಡಿಸುತ್ತಿರುವುದರಿಂದ ನಮ್ಮ ಸಂಘಟನೆ ಬಡವರಿಗೆ ನಿವೇಶನ ಕೊಡಿಸಲು ಶಾಂತಿಯುತ ಹೋರಾಟ ಮಾಡಲಾಗುವುದೆಂದರು. ನಿವೇಶನ ರಹಿತ ಬಡವರಿಗೆ ಜಾಗ ಕೊಡಿಸುವ ವರೆಗೆ ನಮ್ಮ ಸಂಘಟನೆ ಹೋರಾಟ ಮುಂದುವರಿಸಲಾಗಿದ್ದು ಪ್ರತಿ ತಿಂಗಳು ಎರಡನೆ ಮಂಗಳವಾರ ನಿವೇಶನಾ ವಿಚಾರವಾಗಿ ಸಾಂಕೇತಿಕ ದರಣಿ ಹಮ್ಮಿಕೊಳ್ಳಲಾಗಿದ್ದು ಇಂದು ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿ ಮುಂದೆ ಸಾಂಕೇತಿಕ ದರಣಿ ಹಮ್ಮಿಕೊಳ್ಳಲಾಗಿದ್ದು ತಾಲ್ಲೂಕು ಕಛೇರಿಯಲ್ಲಿ ಯಾವ ಒಬ್ಬ ಅಧಿಕಾರಿಯೂ ಇಲ್ಲದಿರುವುದು  ಅವರ ಆಕ್ರೋಶಕ್ಕೆ ಕಾರಣವಾಯಿತು. ಇಂತಹ ದೊಡ್ಡ ಕಛೇರಿಯಲ್ಲಿ ಯವ ಅಧಿಕಾರಿಗಳು ಇಲ್ಲದೆ ಗೈರು ಹಾಜರಿಯಾಗಿದ್ದು ಇವರುಗಳು ಜನರ ಕೆಲಸ ಮಾಡದೆ ಎಲ್ಲರು ಏಕ ಕಾಲದಲ್ಲಿ ಕಛೇರಿಗೆ ಬರದಿರುವುದು ಬಡವರಿಗೆ ಶಾಪವಾಗಿದೆ ಎಂದರು. ನಿವೇಶನ ನೀಡುವ ವಿಚಾರವಾಗಿ ನಮ್ಮ ಸಂಘಟನೆ ನೀಡಿರುವ ಅರ್ಜಿ ಕಛೇರಿಯಲ್ಲಿದ್ದು ಅದನ್ನು ಜರೂರಾಗಿ ಕಾರ್ಯ ನಿರ್ವಹಿಸಿ ಕೂಡಲೆ ಬಡವರಿಗೆ ನಿವೇಶನ ನೀಡಲು ಅಧಿಕಾರಿಗಳು ಮುಂದಾಬೇಕೆಂದು ಅವರು ತಿಳಿಸಿ ಮರು ಮನವಿಯನ್ನು ಸಲ್ಲಿಸಿದರು. ತಾಲ್ಲುಕು ತಾಹಶಿಲ್ದಾರ್ ಅಥವಾ ವಿಶೇಷ ತಹಶಿಲ್ದಾರ್ ಇಲ್ಲದ ಕಾರಣ ಬೆಂಗಳೂರು ಪೂರ್ವ ತಾಲ್ಲುಕು ಚುನಾವಣಾ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. ನಾಳೆ ತಾಹಶಿಲ್ದಾರ್ ನಮ್ಮ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಲು ಸಭೆ ಕರೆದ ಹಿನ್ನೆಲೆಯಲ್ಲಿ ದರಣಿ ಹಿಂಪಡೆಯಲಾಯಿತು ಎಂದು ಅವರು ತಿಳಿಸಿದರು.ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಕನ್ನಲಿ ಕೃಷ್ಣಪ್ಪ ಮಾತನಾಡಿ ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಶ್ರೀಮಂತರ ಪರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಆಪಾದಿಸಿದರು. ಬಡವರು ತಮ್ಮ ಕೆಲಸ ಕಾರ್ಯಗಳಿಗೆ ಕಛೇರಿಗಳಿಗೆ ನಿರಂತರವಾಗಿ ಸುತ್ತುವ ಹಾಗೆ ಮಾಡಲಾಗಿದ್ದು ಅವರ ಪಾಲಿಗೆ ಸರ್ಕಾರಿ ಕಛೇರಿಗಳು ಶಾಪವಾಗಿ ಪರಿಣಮಿಸಿವೆ ಎಂದರು. ಬೆಂಗಳೂರು ಪೂರ್ವ ತಾಲ್ಲುಕಿನಲ್ಲಿ ಸುಮಾರು ಜನ ಕೂಲಿ ಕಾರ್ಮಿಕರು ವಾಸವಾಗಿದ್ದು ಅವರೆಲ್ಲ ಹೆಚ್ಚು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ ಎಂದರು. ಸುಮಾರು ಸರ್ಕಾರಿ ಜಾಗ ಖಾಲಿ ಇದ್ದರೂ ಬಡವರಿಗೆ ನಿವೇಶನ ನೀಡಲು ಸರ್ಕಾರ ಮೀನಾಮೇಶ ಎಣಿಸುತ್ತಿದ್ದಾರೆ ಎಂದರು. ಸರ್ಕಾರ ಕೂಡಲೆ ನವೇಶನ ರಹಿತ ಬಡವರಿಗೆ ನಿವೇಶನ ನೀಡುವವರೆಗೂ ನಮ್ಮ ಸಂಘಟನೆಯಿಂದ ಹೋರಾಟ ಮಾಡಲಾಗುವುದೆಂದು ಅವರು ತಿಳಿಸಿದರು.
ಈ ಸಂದರ್ಬದಲ್ಲಿ ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯ ಪದಾಧಿಕಾರಿಗಳಾದ ಬೆಳತೂರು ವೆಂಕಟೇಶ್, ಮುನಿರಾಜು, ಬೆಂ.ಪೂ.ತಾ. ಅದ್ಯಕ್ಷ ಕಾವೇರಪ್ಪ, ಶಿರೀಷಾ, ಜ್ಯೋತಿ, ಕಾಡುಗುಡಿ ವಾರ್ಡ್ ಅಧ್ಯಕ್ಷ ಸಲೀಂ, ಪದಾಧಿಕಾರಿಗಳಾದ ಎಸ್.ಗೀತಾ, ಮಹಾದೇವಿ, ರಾಜು, ನಂಜಪ್ಪ, ಸಮೀನಾ, ಗಿರಿಜಾ, ಗೋವಿಂದಪ್ಪ ಮುಂತಾದವರು ಹಾಜರಿದ್ದರು.