ನೀರಾವರಿ ಯೋಜನೆಗೆ ಗುದ್ದಲಿಪೂಜೆ…

207

ಮಂಡ್ಯ/ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಕಸಬಾಹೋಬಳಿ ತಿಟ್ಟಮಾರನಹಳ್ಳಿ ಹಾಗೂ ಹುಚ್ಚೇಗೌಡನದೊಡ್ಡಿ ಏತ ನೀರಾವರಿ ಯೋಜನೆ ಗುದ್ದಲಿಪೂಜೆಯನ್ನು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ನೆರವೇರಿಸಲಾಯಿತು.ಮಳವಳ್ಳಿ ತಾಲ್ಲೂಕಿನ ಅಗಸನಪುರ ಗ್ರಾಮದ ಬಳಿ ನಡೆದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಕ್ಷೇತ್ರದಲ್ಲಿ ನೀರಾವರಿಗೆ ಸಂಬಂದಪಟ್ಟದಂತೆ ಯೋಜನೆಯೂ ಬಾಕಿ ಉಳಿದಿಲ್ಲ ಎಂದರು.ಮಾಜಿ ಪ್ರದಾನಿ ದೇವಗೌಡ ಹಾಗೂ ಹೆಚ್ ಡಿ ಕುಮಾರಸ್ವಾಮಿ ರವರು ಈ ಕ್ಷೇತ್ರ ಕ್ಕೆ ಏನು ಕೊಡುಗೆ ಎಂದು ಪ್ರಶ್ನಿಸಿದರು. ನನ್ನ 10 ವರ್ಷದ ಶಾಸಕ ಅವದಿಯಲ್ಲಿ ಕ್ಷೇತ್ರಕ್ಕೆ ಯಾವ ಯೋಜನೆಗಳನ್ನು ತರಬೇಕೋ ಎಲ್ಲಾ ಯೋಜನೆಗಳನ್ನು ಹೋರಾಟ ಮಾಡಿದ್ದೇನೆ ಎಂದರು ಕಾರ್ಯಕ್ರಮ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಮು. ದೇವರಾಜು. ಜಿ.ಪಂ ಸದಸ್ಯ ಹನುಮಂತ, ಸುಷ್ಮಾರಾಜು, ತಾ.ಪಂ ಸದಸ್ಯ ಪುಟ್ಟಸ್ವಾಮಿ, ಸುಂದರೇಶ್, ಶಂಕರ, ಜಿ.ಪಂ ಮಾಜಿಸದಸ್ಯ ಚೌಡಯ್ಯ, ಸುರೇಶ್, ಸೇರಿದಂತೆ ಮತ್ತಿತ್ತರರು ಇದ್ದರು . ಇದಕ್ಕೂ ಮುನ್ನ ಬೈಕ್ ಜಾಥ ಹಾಗೂ ಎತ್ತಿನಗಾಡಿಯನ್ನು ಶಾಸಕರು ಓಡಿಸುವ ಮೂಲಕ ಜನರ ಗಮನಸೆಳೆದರು.