ಸರ್ಕಾರಿ ಶಾಲಾ ಮಕ್ಕಳಿಗೆ ಟ್ಯಾಬ್ ಮುಖಾಂತರ ಈಜಿ ಇಂಗ್ಲೀಷ್ ಕಲಿಕೆ 

183

ಬೆಂಗಳೂರು (ಹೊಸಕೋಟೆ): ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ ಆದರೆ ಇನ್ನು ಉತ್ತಮ ಗುಣಮಟ್ಟದಲ್ಲಿ ಸರ್ಕಾರಿ ಶಾಲಾ ಮಕ್ಕಳು ಇಂಗ್ಲೀಷ್ ಅನ್ನು ಸುಲಭವಾಗಿ ಟ್ಯಾಬ್ ಮುಖಾಂತರ ಮಕ್ಕಳಿಗೆ ಇಂಗ್ಲೀಷ್ ಕಲಿಸಲು ಅಕ್ಷರ ಪೌಂಡೇಷನ್ ಸಂಸ್ಥೆ ಮುಂದಾಗಿರುವುದು ಹೆಮ್ಮೆ ತಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅದ್ಯಕ್ಷರಾದ ವಿ.ಪ್ರಸಾದ್ ಎಂದು ಹೇಳಿದರು. 

ತಾಲ್ಲೂಕಿನ ನಂದಗುಡಿ ಹೋಬಳಿಯ ಚಿಕ್ಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಅಕ್ಷರ ಪೌಂಡೇಷನ್ ವತಿಯಿಂದ ಆಯೋಜಿಸಿದ್ದ ಟ್ಯಾಬ್ ಮೂಲಕ ಒಂದನೇ ತರಗತಿ ಮಕ್ಕಳಿಗೆ ಈಜಿ ಇಂಗ್ಲೀಷ್ ಕಲಿಸುವ ಕಾರ್ಯಕ್ರಮವನ್ನು ಬೆಂ.ಗ್ರಾ. ಜಿಲ್ಲಾ ಪಂ. ಅದ್ಯಕ್ಷರಾದ ವಿ.ಪ್ರಸಾದ್ ಉದ್ಘಾಟನೆ ಮಾಡಿ ನಂತರ ಮಾತನಾಡಿದರು. ಮಕ್ಕಳೆಲ್ಲಾ ಒಟ್ಟುಗೂಡಿ ಇಂಗ್ಲೀಷ್‍ನಲ್ಲಿ ಮಾತನಾಡುತ್ತಾ ವಸ್ತುಗಳನ್ನು ಗುರಿತುಸುತ್ತಾ ವಸ್ಥುಗಳಿಗೆ ಸಂಬಂದ ಪಟ್ಟ ಅಕ್ಷರಗಳನ್ನು ಇಂಗ್ಲೀಷ್‍ನಲ್ಲೇ ಹೇಳುತ್ತಿರೋ ಈ ಮಕ್ಕಳು ಸುಲಬವಾಗಿ ಇಂಗ್ಲೀಷ್ ಕಲಿಯಲು ಅಕ್ಷರ ಪೌಂಡೇಷನೆ ಎಂಬ ಎನ್‍ಜಿಓ ಸಂಸ್ತೆ ಟ್ಯಾಬ್‍ಗಳನ್ನು ಬಳಸಿ ಸುಲಭವಾಗಿ ಇಂಗ್ಲೀಷ್ ಕಲಿಯಲು ತರಬೇತಿ ನೀಡುತ್ತಿದ್ದು ಸುಮಾರು 15 ಸರ್ಕಾರಿ ಶಾಲೆಯ ಒಂದನೇ ತರಗತಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಇಂಗ್ಲೀಷ್ ಕಲಿಯಲು ಅನುವುಮಾಡಿಕೊಟ್ಟಿದೆ, ಪ್ರತಿ ತಾಲ್ಲೂಕಿನ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಇದೇ ತರದಲ್ಲಿ ಇಂಗ್ಲೀಷ್ ಕಲಿಗೆ ಬಗ್ಗೆ ಅರಿವು ಮೂಡಿಸಿ ತರಬೇತಿ ನೀಡಿದರೆ ಖಾಸಗಿ ಶಾಲೆಯ ಮಕ್ಕಳನ್ನು ನಮ್ಮ ಸರ್ಕಾರಿ ಶಾಲೆಯ ಮಕ್ಕಳು ಮೀರಿಸುತ್ತಾರೆ ಎಂದು ತಿಳಿಸಿದರು.
ಅಕ್ಷರ ಪೌಂಡೇಷನ್ ಮೇನೇಜರ್ ಕಾಂಚನಾ ಬ್ಯಾನರ್ಜಿ ಮಾತನಾಡಿ ಟ್ಯಾಬ್ ಸಹಾಯದಿಂದ ಪಾಠಗಳನ್ನು ಸುಲಬವಾಗಿ ಕಲಿಯಬಹುದು ಎಂಬ ನಿಟ್ಟಿನಿಂದ ಮಕ್ಕಳಿಗೆ ಟ್ಯಾಬ್ ನೀಡಲಾಗಿದ್ದು ಸರ್ಕಾರಿ ಶಾಲೆಯ ಎಲ್ಲಾ ಶಿಕ್ಷಕರು ಮಕ್ಕಳು ಶ್ರದ್ದೆ ಭಕ್ತಿಯಿಂದ ಅಬ್ಯಾಸ ಮಾಡುತ್ತಿದ್ದಾರೆ ಇದೊಂದು ಸರ್ಕಾರಿ ಕಾರ್ಯಕ್ರಮ ಎಂದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜಿನಪ್ಪ ಮಾತನಾಡಿ ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಕಲಿಕೆ ಆಗುತ್ತಿದೆ ಎಂಬುದು ಜನರಿಗೆ ಅರ್ಥವಾದಾಗ ಮಕ್ಕಳ ದಾಖಲಾತಿಗಳು ಹೆಚ್ಚಾಗುತ್ತದೆ ಪೋಷಕರು ಸಹಾ ಸರ್ಕಾರಿ ಶಾಲೆಗಳನ್ನು ಮೆಚ್ಚಿಕೊಳ್ಳುತ್ತಾರೆ, ಹಾಗೂ ಸರ್ಕಾರಿ ಶಾಲೆಗಳು ಸೌಲತ್ತು ನೀಡುವುದಕ್ಕಲ್ಲದೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ ಎಂಬ ಮನೋಭಾವ ಪೋಷಕರಲ್ಲಿ ಬರಲಿ ಟ್ಯಾಬ್ ಮುಖಾಂತರ ಸುಲಭ ಇಂಗ್ಲೀಷ್ ಕಲಿಕೆ ಒಂದನೆ ತರಗತಿ ಮಕ್ಕಳಿಗಲ್ಲದೆ ಮೇಲ್ಪಟ್ಟ ಮಕ್ಕಳಿಗೂ ಹೆಚ್ಚು ಉಪಯೋಗವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಕೆಂಚೇಗೌಡ, ಅಕ್ಷರ ಪೌಂಡೇಷನ್ ಮ್ಯಾನೇಜರ್ ಕಾಂಚನಾ ಬ್ಯಾನರ್ಜಿ, ಎಸ್ ಡಿ ಎಂ ಸಿ ಅದ್ಯಕ್ಷರು ಉಪಾದ್ಯಕ್ಷರು, ಗ್ರಾಮದ ಮುಖಂಡರುವ ಹಾಗೂ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.