ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..

165

ಮಂಡ್ಯ/ಮಳವಳ್ಳಿ:ಗ್ರಾಮೀಣ ಪ್ರದೇಶ ಕ್ರೀಡೆಗಳನ್ನು ಶಾಲೆ ಮಕ್ಕಳಯಲ್ಲಿ ಆಡಿಸುವ ಮೂಲಕ ಯುಗಾದಿ ಮುನ್ನ ದಿನ ಇಂದು ಸಂಭ್ರಮಿಸಿದರು. ಮಳವಳ್ಳಿ ಪಟ್ಟಣದ ಗಂಗಾಮತ ಬೀದಿಯಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುಗಾದಿ ಪ್ರಯುಕ್ತ ಮಕ್ಕಳಯಲ್ಲಿ ಕೋಲಾಟ, ಲಗೋರಿ,ಕಬ್ಬಡಿ, ಸಾಂಸ್ಕೃತಿಕ ನೃತ್ಯ ಗಳನ್ನು ಮಾಡಿಸಲಾಯಿತು.ಈ ಕಾರ್ಯಕ್ರಮ ವನ್ನು ಎಸ್ ಡಿ ಎಂಸಿ ಅಧ್ಯಕ್ಷ ಜರ್ನಾದನಸ್ವಾಮಿ ಉದ್ಘಾಟಿಸಿ ಮಾತನಾಡಿ,ಯುಗಾದಿ ಬಂದರೆ ಸಾಕು ಇಸ್ಪೀಟ್ . ಜೂಜಾಟ . ಆಡುತ್ತಾರೆ ಆದರೆ ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಇದು ಮರೆಯಬಾರದು ಎನ್ನುವ ದೃಷ್ಟಿ ಯಿಂದ ಶಾಲೆ ಮಕ್ಕಳಲ್ಲಿ ಆಡಿಸುತ್ತಿದೆ. ಎಂದರು. ಕಾರ್ಯಕ್ರಮ ದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡ ಶಿವಕುಮಾರ್,ವೆಂಕಟೇಶ್ ಶಿಕ್ಷಕ ಚಂದ್ರಶೇಖರ ಆಚಾರಿ,ಲಿಂಗಯ್ಯ ಸೇರಿದಂತೆ ಮತ್ತಿತ್ತರರು ಇದ್ದರು