ಟಿಕೆಟ್ ಗಾಗಿ ಮತ್ತೊಂದು ಕಂಟಕ..

226

ಬೆಂಗಳೂರು ಗ್ರಾಮಾಂತರ/ದೇವನಹಳ್ಳಿ:ಸಂಸದ ವೀರಪ್ಪ ಮೊಯ್ಲಿ ಇತ್ತೀಚಿಗಷ್ಟೆ ಟ್ವಿಟರ್‌ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ವಿರುದ್ಧ ವಿವಾದ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೆ ಇದೀಗ ಮತ್ತೊಂದು ವಿಚಾರದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಎಸ್ಸಿ ಸಮುದಾಯ ಸಂಸದ ವೀರಪ್ಪ ಮೊಯ್ಲಿ ವಿರುದ್ಧ ತಿರುಗಿ ಬಿದಿದ್ದಾರೆ.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ಎಸ್ಸಿ ಸಮುದಾಯದ ಮುಖಂಡರ ಸಭೆಯಲ್ಲಿ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿ   ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ೬ ಸಾವಿರ ಮತದಾರರನ್ನು ಹೊಂದಿರುವ ಬೋವಿ ಜನಾಂಗದ ಮಾಜಿ ಶಾಸಕ ವೆಂಕಟಸ್ವಾಮಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೊಡಿಸಲು ಮುಂದಾಗಿದ್ದಾರೆ. ದೇವನಹಳ್ಳಿ ಕ್ಷೇತ್ರದಲ್ಲಿ ಎಸ್ಸಿ ಜನಾಂಗದ ಎಡ ಮತ್ತು ಬಲ ಗೈ ಸಮುದಾಯದ ಸುಮಾರು ೭೫ ಸಾವಿರಕ್ಕೂ ಅಧಿಕ ಮತಗಳನ್ನು ಹೊಂದಿದ್ದಾರೆ. ಆದರೂ ಕಡಿಮೆ ಮತಗಳಿರುವ ಬೋವಿ ಜನಾಂಗಕ್ಕೆ ಟಿಕೇಟ್  ಕೊಡಿಸಲು  ಮುಂದಾಗಿರುವುದು ಎಸ್ಸಿ ಸಮುದಾಯದರ ಅಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ (ಎಸ್ಸಿ) ಘಟಕದ ಅಧ್ಯಕ್ಷ ಲೊಕೇಶ್‌ಬಹಳ ಹಿಂದುಳಿದ ಸಮಾಜಗಳು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಮೀಸಲಾತಿ ಕ್ಷೇತ್ರವನ್ನು ರಚನೆ ಮಾಡುತ್ತಾರೆ.ಆದರೆ ದೇವನಹಳ್ಳಿ ಕ್ಷೇತ್ರದಲ್ಲಿ ಎಸ್ಸಿ ಸಮುದಾಯದಲ್ಲಿ ಯಾವ ಜನಾಂಗ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ್ದಾರೆ ಎಂಬುದನ್ನು ವೀಕ್ಷಣೆ ಮಾಡಿ ಮೀಸಲಾತಿ ಕ್ಷೇತ್ರನಿಶ್ಚಯ ವಾಗುತ್ತದೆ.ಹೀಗಾಗಿ ಕ್ಷೇತ್ರದಲ್ಲಿ ಮಾದಿಗ ಮತ್ತು ಹೊಲಯ ಜನಾಂಗದವರು ೭೫ ಸಾವಿರಕ್ಕೂ ಅಧಿಕವಾಗಿದ್ದಾರೆ.ಬೋವಿ ಜನಾಂಗದವರು ಕೇವಲ ೨ ರಿಂದ ೩ ಸಾವಿರ ಮತದಾರರು ಇದ್ದಾರೆ. ಅಂತಹ ಜನಾಂಗಕ್ಕೆ ಈಗಾಗಲೇ ೨ ಭಾರಿಟಿಕೆಟ್  ನೀಡಲಾಗಿದೆ.ಇದೀಗ ಮತ್ತೆ ಮುಂದಿನ ೨೦೧೮ ರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬೋವಿ ಜನಾಂಗದ ಮಾಜಿ ಶಾಸಕ    ವೆಂಕಟಸ್ವಾಮಿ  ಅವರಿಗೆ  ನೀಡಲು ಸಂಸದ ವೀರಪ್ಪ ಮೊಯ್ಲಿ ಮುಂದಾಗಿದ್ದಾರೆ.ಎಸ್ಸಿ ಸಮುದಾಯದ ಎಡ ಅಥವಾ ಬಲ ಗೈ ಸಮುದಾಯಕ್ಕೆ ಟಿಕೇಟ್ ಕೊಡಬೇಕು.ಈಗಾಗಲೇ ೫ ರಿಂದ ೬ ಆಕಾಂಕ್ಷಿಗಳು ಕೆಪಿಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಚುನಾವಣೆಯಲ್ಲಿ ವೆಂಕಟಸ್ವಾಮಿಗೆ ಟಿಕೇಟ್ ಕೊಟ್ಟರೆ ನಮ್ಮ ಸಮುದಾಯದ ನಿರ್ಧಾರ ಬೇರೆ ರೀತಿ ಇರುತ್ತದೆ ಎಂದು ತಿಳಿಸಿದರು.ವಿಜಯಪುರ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ನಾರಾಯಣಸ್ವಾಮಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ನೇರ ಪೈಟ್ ಇರೋದು (ಜೆಡಿಎಸ್ )ಪಕ್ಷ, ಅವರು ಎಡ ಅಥವಾ ಬಲ ಸಮುದಾಯಕ್ಕೆ ಟಿಕೇಟ್ ನೀಡುತ್ತಾರೆ. ಆದರೆ ಕ್ಷೇತ್ರದಲ್ಲಿ ಕಡಿಮೆ ಮತದಾರರು ಇರುವ ಬೋವಿ ಜನಾಂಗಕ್ಕೆ ಕಾಂಗ್ರೆಸ್ ನಿಂದ ಟಿಕೇಟ್ ಕೊಟ್ಟರೆ ನಮ್ಮ ಪಕ್ಷದ ಮತದಾರರು (ಜೆಡಿಎಸ್ )ನತ್ತ ಹೋಗುತ್ತಾರೆ.ಆದ್ದರಿಂದ ವೆಂಕಟಸ್ವಾಮಿಗೆ ಪ್ರಬಲವಾಗಿ ಟಿಕೇಟ್ ನೀಡುವುದನ್ನು ವಿರೋಧ ಮಾಡುತ್ತೇವೆ.ಎಡ ಗೈ ಮತ್ತು ಬಲ ಗೈ ಸಮುದಾಯದಿಂದ ಎಂ.ನಾರಾಯಣಸ್ವಾಮಿ,ಸುರೇಸ್,ಛಲವಾದಿ ನಾರಾಯಣಸ್ವಾಮಿ,ಮಾರುತಿ, ಅವರು ಕೆಪಿಸಿಸಿ ಯಲ್ಲಿ ಟಿಕೇಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಈ ಪೈಕಿ ಯಾರಿಗಾದರೂ ಟಿಕೇಟ್ ಕೊಟ್ಟರೆ ಉತ್ತಮ ಇಲ್ಲವಾದರೆ ಇದರ ಪರಿಣಾಮ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಬೈಟ್ :::ಲೋಕೇಶ್ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ