ಶಾಸಕರಿಗೆ ಪ್ರಾಣ ಬೆದರಿಕೆ…

209

ಚಿಕ್ಕಬಳ್ಳಾಪುರ/ಚಿಂತಾಮಣಿ:ಗುರುತು ಸಿಗದ ವ್ಯಕ್ತಿ ತಮಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಚಿಂತಾಮಣಿ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿ ಮಾದಮಂಗಳ ಗ್ರಾಮದ ಅಪರಿಚಿತ ವ್ಯಕ್ತಿ ಸೋಮವಾರ ಬೆಳಿಗ್ಗೆ 10-45ರ ಸಮಯದಲ್ಲಿ ತಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಾಸಕರು ದೂರಿನಲ್ಲಿ ತಿಳಿಸಿದ್ದಾರೆ.ಮಾರ್ಚ್ 16ರಂದು ಬೆಳಗ್ಗೆ 10 30 ರ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜೆಯ ಕಾರ್ಯಕ್ರಮ ವನ್ನು ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ.ಈ ಕಾರ್ಯಕ್ರಮಕ್ಕೆ ತಾನು ಹಾಗೂ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಾಣಿ ಕೃಷ್ಣ ರೆಡ್ಡಿ ಅವರು ಭಾಗವಹಿಸಿದ್ದೆವು. ಈ ಸಮಯದಲ್ಲಿ ಮಾಜಿ ಶಾಸಕರ ಬೆಂಬಲಿಗರು ಸುಮಾರು 150 ಮಂದಿ ಜಮಾಯಿಸಿ ಕ್ಯಾಂಟೀನ್ ಗುದ್ದಲಿ ಪೂಜೆಯನ್ನು ನೆರವೇರಿಸುವುದಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ತೂರಾಟ ಮಾಡಿ ಗೂಂಡಾಗಳಂತೆ ವರ್ತಿಸಿ ದೌರ್ಜನ್ಯ ವೆಸಗಿದಗದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಮಾರ್ಚ್ 19ರಂದು ಸೋಮವಾರ ಬೆಳಗ್ಗೆ ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮಗೆ ಮಾನ ಮರ್ಯಾದೆ ಏನಾದರೂ ಇದೆಯೇ ಎಂದು ಪ್ರಶ್ನಿಸಿ ಎಪಿಎಂಸಿ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜಾ ಕಾರ್ಯಕ್ರಮಕ್ಕೆ ವಾಣಿ ಕೃಷ್ಣಾ ರೆಡ್ಡಿ ಎಂಬ ಮಹಿಳೆಯರನ್ನು ಕರೆತಂದಿದ್ದು ಯಾಕೆ” ನೀವು ಚಿಂತಾಮಣಿಗೆ ಬರುತ್ತೀರಾ” ನಿಮಗೆ ಒಂದು ಗತಿ ಕಾಣಿಸುತ್ತೇನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೊಂಟದ ಕೆಳಗಿನ ಭಾಷೆಯಲ್ಲಿ ಬೈದು ಜೀವಬೆದರಿಕೆ ಹಾಕಿದ್ದಾನೆ . ಗುರುತು ತಿಳಿಯದ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಶಾಸಕರು ದೂರಿನಲ್ಲಿ ಮನವಿ ಮಾಡಿದ್ದಾರೆ.