ಯಡಿಯೂರಪ್ಪ ಗ್ರಾಮಸಭೆ ಹಾಗೂ ಅಕ್ಕಿ ಸಂಗ್ರಹ ಕಾರ್ಯಕ್ರಮ…

332

ಚಿಕ್ಕಬಳ್ಳಾಪುರ/ಚಿಂತಾಮಣಿ:ಬಿಜೆಪಿ ಪಕ್ಷದ ವತಿಯಿಂದ ರೈತಬಂದು ಯಡಿಯೂರಪ್ಪ ಗ್ರಾಮಸಭೆ ಹಾಗೂ ಅಕ್ಕಿ ಸಂಗ್ರಹ ಕಾರ್ಯಕ್ರಮವನ್ನು ತಾಲ್ಲೂಕಿನ ಉಪ್ಪರಪೇಟೆ ಪಂಚಾಯಿತಿಯಲ್ಲಿ ಬಿಜೆಪಿ ಮುಖಂಡ ಮಾಡಿಕೆರೆ ಅರುಣ್ ಬಾಬು ರವರ ನೇತೃತ್ವದಲ್ಲಿ ಅಕ್ಕಿ ಯನ್ನು ಯಡಿಯೂರಪ್ಪ ರವರ ಜೋಳಿಗೆ ಮನೆಮನೆಗೂ ತೆರಳಿ ಸಂಗ್ರಹ ಮಾಡಿದರು.

ನಂತರ ಮಾತನಾಡಿ, ಮಾಡಿಕೆರೆ ಅರುಣ್ ಬಾಬು ರವರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಿ ನೀಡಿದ್ದೀರಿ ಈ ಒಂದು ಬಾರಿ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ಅಧಿಕಾರ ನೀಡಿ. ಮೋದಿ ಆಡಳಿತದಲ್ಲಿ ರೈತರಿಗೆ ಹಾಗೂ ದೇಶದ ಜನತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲೂ ಯಡಿಯೂರಪ್ಪ ರವರಿಗೂ ಅಧಿಕಾರಿ ನೀಡಿದರೆ ರೈತ ಜೀವನ ಉತ್ತಮವಾಗಿರುತ್ತದೆ.

ರಾಜ್ಯದಲ್ಲಿ ಈ ಸರ್ಕಾರ ದಲ್ಲಿ ರೈತರು ಆತ್ಮಹತ್ಯೆ ಹೆಚ್ಚಾಗಿದ್ದು, ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ 9 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆ ರೈತರ ಹೆಸರಿನಲ್ಲಿ ಅನ್ನದಾನವನ್ನು ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕುರುಬೂರ್ ರಾಜು ,ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತಿತರರು ಉಪಸ್ಥಿತಿಯಿದರು.