ಯಡಿಯೂರಪ್ಪ ಗ್ರಾಮಸಭೆ ಹಾಗೂ ಇಡೀ ಅಕ್ಕಿ ಸಂಗ್ರಹ ಕಾರ್ಯಕ್ರಮ..

181

ಮಂಡ್ಯ/ಮಳವಳ್ಳಿ:ಬಿಜೆಪಿ ಪಕ್ಷದ ವತಿಯಿಂದ ರೈತಬಂದು ಯಡಿಯೂರಪ್ಪ ಗ್ರಾಮಸಭೆ ಹಾಗೂ ಇಡೀ ಅಕ್ಕಿ ಸಂಗ್ರಹ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ರಾಜ್ಯ ರೈತ ಮೋರ್ಚಾಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು ನೇತೃತ್ವದಲ್ಲಿ ಇಡೀ ಅಕ್ಕಿ ಯನ್ನು ಯಡಿಯೂರಪ್ಪ ರವರ ಜೋಳಿಗೆ ಮನೆಮನೆಗೂ ತೆರಳಿ ಸಂಗ್ರಹ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ,ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರಿ ನೀಡಿದ್ದೀರಿ ಈ ಒಂದು ಬಾರಿ ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ಅಧಿಕಾರ ನೀಡಿ. ಮೋದಿ ಆಡಳಿತದಲ್ಲಿ ರೈತರಿಗೆ ಹಾಗೂ ದೇಶದ ಜನತೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲೂ ಯಡಿಯೂರಪ್ಪ ರವರಿಗೂ ಅಧಿಕಾರಿ ನೀಡಿದರೆ ರೈತ ಜೀವನ ಉತ್ತಮವಾಗಿರುತ್ತದೆ. ರಾಜ್ಯದಲ್ಲಿ ಈ ಸರ್ಕಾರ ದಲ್ಲಿ ರೈತರು ಆತ್ಮಹತ್ಯೆ ಹೆಚ್ಚಾಗಿದ್ದು, ಅದರಲ್ಲೂ ಮಂಡ್ಯಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಯಡಿಯೂರಪ್ಪ ರವರು ಸ್ವಾಂತನ ಪತ್ರವನ್ನು ರೈತಕುಟುಂಬಕ್ಕೆ ತಲುಪಿಸುತ್ತಿದ್ದಾರೆ. ಎಂದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಮುಂದೆ ಇಡೀ ಅಕ್ಕಿ ಸಂಗ್ರಹ ಮಾಡಿ ರೈತ ಮಹಿಳಾ ಹಾಗೂ ಪುರುಷರಿಗೆ ಸನ್ಮಾನ ಮಾಡಲಾಯಿತು. ಇದೇ ರೀತಿ ನೆಲಮಾಕನಹಳ್ಳಿ,,ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಗಳಲ್ಲಿ ಸಹ ನಡೆಸಲಾಯಿತು ಕಾರ್ಯಕ್ರಮ ದಲ್ಲಿ,ಶಿವಲಿಂಗಸ್ವಾಮಿ.HB( ರೈತ ಮೋರ್ಚ ಜಿಲ್ಲಾ ಕಾರ್ಯದರ್ಶಿ) ಜವರೇಗೌಡರು,ತಳಗವಾದಿ ಗೀರಿಶ್,ಚಿಕ್ಕಮೂಲಗೂಡು ಶಶಿ,ರಾಜೇಂದ್ರ,ಚಾಮೇಗೌಡ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

..