ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ..

226

ಬೆಂಗಳೂರು/ಕೆ.ಆರ್.ಪುರ:ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುವರೆಗೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.ತಾಲೂಕು ಅರೋಗ್ಯಧಿಕಾರಿ ಚಂದ್ರಶೇಖರ್ ಮಾತನಾಡಿ, ಕ್ಷಯರೋಗ ಮಾರಣಾಂತಿಕವಾದದ್ದು, ಇದನ್ನು ಬೇರು ಸಮೇತ ಕಿತ್ತುಹಾಕಬೇಕಾಗಿದೆ. ಕ್ಷಯರೋಗದಿಂದ ಆರೋಗ್ಯ ಸಾಮಾಜಿಕ ಮತ್ತು ಆರ್ಥಿಕ ಬೆಳವಣೆಗೆಗಳ ಮೇಲೆ ಉಂಟಾಗುವ ಪರಿಣಾಮ ರೋಗದ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವನ್ನು ಭಾರತ ಸೇರಿದಂತೆ ವಿಶ್ವದ್ಯಾದಂತ  ಆಚರಿಸಲಾಗುತ್ತಿದೆ ಎಂದರು.ವಲಸಿಗರು, ನಿರಾಶ್ರಿತರು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ. ಅನಕ್ಷರತೆ, ಅಜ್ಙಾನ, ಮೂಡನಂಬಿಕೆ, ಮೂಲಭೂತ ಸೌಕರ್ಯದ ಕೊರತೆಯಿಂದ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ದೊರೆಯಾದೆ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರತಿವರ್ಷ ಒಂದು ಥೀಮ್ನೊಂದಿಗೆ ಕ್ಷಯರೋಗದ ದಿನವನ್ನು ಆಚರಿಸಲಾಗುತ್ತದೆ. ಕ್ಷಯರೋಗ ಮತ್ತು ವಿಶ್ವ ನಿರ್ಮಾಣಕ್ಕೆ ಕ್ಷಯರೋಗವನ್ನು ನಿರ್ಮೂಲನೆ ಗೊಳಿಸಿ ನಿರ್ಮಿಸಿ ಎನ್ನುವುದು ಈ ವರ್ಷದ ಧ್ಯೇಯವಾಗಿದೆ ಎಂದರು.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶ್ರೀನಿವಾಸ್, ವಿಶ್ವ ಆರೋಗ್ಯ ಸಂಸ್ಥೆಯವರು 1995 ರಿಂದ ಕ್ಷಯರೋಗ ದಿನವನ್ನು ಆಚರಿಸುತ್ತಾ ಬಂದಿದ್ದಾರೆ. ಭಾರತದಲ್ಲಿ ಕೂಡ ಕ್ಷಯರೋಗ ಮುಕ್ತ ರಾಷ್ಟ್ರ ಮಾಡಲು ಶ್ರಮಿಸಲಾಗುತ್ತದೆ. ಭಾರತದಲ್ಲಿ ಕ್ಷಯರೋಗದಿಂದ ಬಳಲುವವರು 211 ಲಕ್ಷ ಜನರಿದ್ದಾರೆ ಇದನ್ನು 2025ರ ವೇಳೆಗೆ 11 ದಾಖಲೆ ಪ್ರಮಾಣಕ್ಕೆ ಇಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಸಕರ್ಾರೇತರ ಸಂಸ್ಥೆಗಳಲ್ಲಿ ಕ್ಷಯ ಇರುವವರಿಗೆ ಉಚಿತವಾಗಿ ಎಲ್ಲ ರೀತಿಯ ಪರೀಕ್ಷೆ ಮಾಡಲಾಗುತ್ತದೆ. ಕ್ಷಯ ರೋಗ ಇರುವ ವ್ಯಕ್ತಿಯನ್ನು ಆಸ್ಪತ್ರೆ ಕರೆತಂದು ಪರೀಕ್ಷೆ ಮಾಡಿಸಿದ ವ್ಯಕ್ತಿಗೆ ಸಕರ್ಾರದ ವತಿಯಿಂದ 1000 ಗೌರವಧನವನ್ನು ಕೊಡಲಾಗುತ್ತದೆ. ಕ್ಷಯ ರೋಗ ಇರುವ ವ್ಯಕ್ತಿ 6 ತಿಂಗಳುವರೆಗೆ ಚಿಕಿತ್ಸೆ ಪಡೆದರೆ ಪ್ರತಿ ತಿಂಗಳೂ 500 ರೂ.ನಂತೆ 3000 ಸಾವಿರ ರೂ. ಅದಕ್ಕೂ ಮೆಲ್ಪಟ್ಟು  8 ತಿಂಗಳಿಗೆ 4000 ಸಾವಿರ ರೂ, ಒಂದು ವರ್ಷ ಚಿಕಿತ್ಸೆ ಪಡೆದರೆ 12000 ಸಾವಿರ ರೂ ಗೌರವಧನ ಒದಗಿಸಲಾಗುತ್ತದೆ. ಸಕರ್ಾರೇತರ ಸಂಸ್ಥೆಗಳಿಂದ ನೇಮಕವಾದ ಸ್ಥಳೀಯ ಆರೋಗ್ಯಧಿಕಾಧಿಕಾರಿಗಳು ಕ್ಷಯ ರೋಗ ಇರುವ ವ್ಯಕ್ತಿಗೆ ಮಾತ್ರೆಯನ್ನು ಒದಗಿಸಿದರೆ ಅವರಿಗೂ ಕೂಡ ಸರ್ಕಾರದಿಂದ 5000 ಸಾವಿರ ರೂ ಗೌರವಧನ್ನು ಕೊಡಲಾಗುತ್ತದೆ ಎಂದರು.