ಸೇರ್ಪಡೆ ಕಾರ್ಯಕ್ರಮ ಮತ್ತು ಅಭಿಮಾನಿ ಕಾರ್ಯಕರ್ತರ ಸಮಾವೇಶ…

166

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲೂಕಿನ ಮುರುಗಮಲ್ಲ ಗ್ರಾಮದಲ್ಲಿ ಮಾಜಿ ಶಾಸಕ ಎಂ ಸಿ ಸುಧಾಕರ್ ಅವರ ಬಣ್ಣದಿಂದ ಸೇರ್ಪಡೆ ಕಾರ್ಯಕ್ರಮ ಮತ್ತು ಎಂ.ಸಿ.ಎಸ್ ಫೋರ್ಸ್ ಅಭಿಮಾನಿ ಕಾರ್ಯಕರ್ತರು ಸಮಾವೇಶ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಮಾಜಿ ಶಾಸಕರು ಮುರುಗಮಲ್ಲ ಗ್ರಾಮದಲ್ಲಿ ಅಂಗಡಿಗಳ ಸ್ಥಳಾಂತರ ಮಾಡಿ ಎರಡೂವರೆ ವರ್ಷ ಆಗಿದೆ ಅವರಿಗೆ ಪರ್ಯಾಯ ಕಲ್ಪಿಸಲು ಶಾಸಕರು ಏನು ಕ್ರಮ ಕೈಗೊಂಡಿದ್ದಾರೆಂದು ಬಹಿರಂಗ ಪಡಿಸಲಿ ಶಾಸಕರಾಗಿದ್ದಾಗ ಕೈಗೊಂಡಿದ್ದ ಕಾಮಗಾರಿಗಳ ವಿವರವನ್ನು ದಾಖಲೆ ಸಮೇತ ನೀಡುವುದಾಗಿ ತಿಳಿಸಿದರು.ನಗರದಲ್ಲಿ ಎರಡು ಮೂರು ದಿನಗಳಿಗೆ ನೀರು ಸರಬರಾಜಾಗುತ್ತಿದ್ದ ಸ್ಥಿತಿ ಬದಲಾಗಿ ಇಂದು20 ರಿಂದ 25 ದಿನಗಳಿಗೆ ನೀರು ಸರಬರಾಜು ಆಗುವಂತಹ ಪರಿಸ್ಥಿತಿಗೆ ಬಂದಿರುವುದೇ ಶಾಸಕರ ಅಭಿವೃದ್ಧಿ ಎಂದು ಲೇವಡಿ ಮಾಡಿದರು.ಜೀ ಹುಜೂರುಗಳಿಗೆ ಕಾಮಾಲೆ ನಿಮ್ಮ ಪಕ್ಕದಲ್ಲಿ ಕುಳಿತು ಜೀ ಹುಜೂರ್ ಎಂದು ಹೇಳುತ್ತಿರುವುವರಿಗೆ ಕಾಮಾಲೆ ರೋಗ ಬಂದಿದೆ ಹೊರತು ನಮಗೆ ಅಲ್ಲ ಎಂದು ಶಾಸಕರ ಬೆಂಬಲಿಗರನ್ನುದ್ದೇಶಿ ಟೀಕಿಸಿದ ಮಾಜಿ ಶಾಸಕರು.

ವಿಧಾನಸಭಾ ಚುನಾವಣೆಯಲ್ಲಿ ಜನ ನನ್ನನ್ನು ಮನೆಗೆ ಕಳುಹಿಸಿದಗದಾರೆಂದು ಹೇಳುವ ನಿಮ್ಮಗೆ ಗ್ರಾಮ ಪಂಚಾಯಿತಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಎಪಿಎಂಸಿ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನು ಎಲ್ಲಿಗೆ ಕಳಿಸಿದ್ದಾರೆ ಎಂಬುದನ್ನು ಆಲೋಚಿಸಿ ಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಶ್ರೀರಾಮ ರೆಡ್ಡಿ ಕೃಷ್ಣಾ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.