ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ..

144

ಮಂಡ್ಯ/ಮಳವಳ್ಳಿ:ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ಅರುಂಧತಿ ಉದ್ಘಾಟಿಸಿ ಮಾತನಾಡಿ. ಮಹಿಳೆಯರ ದಿನಾಚರಣೆ ಕೇವಲ ವರ್ಷಕ್ಕೊಮ್ಮೆ ಆಚರಣೆ ಮಾಡಿದರೆ ಸಾಲದು . ಪತ್ರಿ ದಿನ ಆಚರಣೆ ಮಾಡಬೇಕು. ಎಂದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರಬಲರಾಗುತ್ತಿದ್ದು ಸಂತೋಷ ಸಂಗತಿ .ಮಹಿಳೆಯರು ಎಲ್ಲಾ ವಿಭಾಗದಲ್ಲೂ ಮುಂದೆ ಬರುತ್ತಿದ್ದು. ಇದರ ಜೊತೆಗೆ ಮಹಿಳೆಯರು ಹಕ್ಕುಗಳ ತಿಳಿದುಕೊಂಡು ಹೋರಾಟದ ಮೂಲಕ ಪಡೆಯಿರಿ ಎಂದರು. ಕಾರ್ಯಕ್ರಮದಲ್ಲಿ ಸಿಐಟಿಯು ಕಾರ್ಯದರ್ಶಿ ಕುಮಾರಿ, ಮಾತನಾಡಿ. ಮಹಿಳೆಯರು ಬದಲಾವಣೆಯಾದರೆ ಸಾಲದು ಪುರುಷರು ಬದಲಾಗಬೇಕು. ಇನ್ನೂ ಮಹಿಳೆಯರ ಮೇಲೆ ಶೋಷಣೆಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಂ.ವಿ ಕೃಷ್ಣ. ವಿ.ಭಾಗ್ಯಮ್ಮ. ಶಿವಕುಮಾರ್. ಪುರಸಭೆ ಸದಸ್ಯ ನಾಗೇಶ್ ಸೇರಿದಂತೆ ಮತ್ತಿತ್ತರರು ಇದ್ದರು