ರಾಮನವಮಿ ರಥ ಯಾತ್ರೆ…

350

ಬೆಂಗಳೂರು/ಮಹದೇವಪುರ:ಶ್ರೀರಾಮ ದೇಶಕ್ಕೆ ಆದರ್ಶ ರಾಜನಾಗಿದ್ದು ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ನಮ್ಮೆಲ್ಲರ ಕರ್ತವ್ಯ, ಕರ್ನಾಟಕದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಈಗಿನ ಆಡಳಿತ ಬದಲಾಗಿ 2018 ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಲ್ಲಾ ಪ್ರಜೆಗಳಿಗೆ ನೆಮ್ಮದಿ ಶಾಂತಿ ಹಾಗೂ ಅಭಿವೃದ್ದಿ ಕೊಡಬೇಕಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಅರವಿಂದ ಲಿಂಬಾವಳಿ ಅಭಿಪ್ರಾಯ ಪಟ್ಟರು.

ಕ್ಷೇತ್ರದ ಹೂಡಿ ಸ್ವೋಟ್ಸ್ಕ್ಲಬ್ನಲ್ಲಿ ಜನ ಸಹಯೋಗ್ ಸಂಘಟನ್ ವತಿಯಿಂದ ಆಯೋಜಿಸಲಾಗಿದ್ದ 2 ನೇ ವರ್ಷದ ರಾಮ ನವಮಿ ರಥ ಯಾತ್ರಾ ರ್ಯಾಲಿಗೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀರಾಮ ನವಮಿ ಅಂಗವಾಗಿ ಕ್ಷೇತ್ರದ ಜನತೆಗೆ ಶುಬಾಷಯ ಕೊರುತ್ತಾ ಅಂದು ನಮ್ಮ ದೇಶ ರಾಮ ರಾಜ್ಯದ ಕನಸ್ಸನ್ನು ಕಂಡಿದ್ದ ಮಹಾತ್ಮ ಗಾಂದಿಜೀಯವರಂತೆ ಇಂದು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ನೆನಸ್ಸು ಮಾಡಲಿದ್ದಾರೆ. ಇಂದು ಶ್ರೀರಾಮ ಮೂರ್ತಿಯನ್ನು ಹೊತ್ತ ರಥ ಹೂಡಿ ಗ್ರಾಮದಿಂದ ರಥ ಯಾತ್ರೆ ರ್ಯಾಲಿ ಹೊರಟು ಹೆದ್ದಾರಿಯ ಮೇಡಿಹಳ್ಳಿ ಮೂಲಕ ಕಾಟಂನಲ್ಲೂರು, ವೈಟ್ಪೀಲ್ಡ್, ವರ್ತೂರು ಕೊಡಿ, ಹಾಗೂ ಮಾರತ್ಹಳ್ಳಿ, ಟಿನ್ ಪ್ಯಾಟ್ರಿ, ಕೆ.ಆರ್.ಪುರ ಮೂಲಕ ಹೂಡಿಗೆ ಆಗಮಿಸಲಾಯಿತು. ಮೆರವಣಿಗೆಯಲ್ಲಿ ಶ್ರೀರಾಮ ನವಮಿ ಜಯಂತಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಸಂಘಟನೆಯಿಂದ ಮಾಡಲಾಯಿತು. ಸುಮಾರು 200 ರಿಂದ 300 ವಾಹನಗಳ ಮೂಲಕ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೋಂಡರು.
ಈ ಸಂದರ್ಬದಲ್ಲಿ ಬಿಜೇಪಿ ಕ್ಷೇತ್ರಾದ್ಯಕ್ಷ ರಾಜಾರೆಡ್ಡಿ, ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ, ಕಬ್ಬಡಿ ಪಿಳ್ಳಪ್ಪ, ಸಂಘದ ಅದ್ಯಕ್ಷ ಬೀರ್ ಬಹದೂರ್ ಸಿಂಗ್, ಕಾರ್ಯದರ್ಶಿ ಸುನಿಲ್ ಕುಮಾರ್ ಪಂಡಿತ್, ಉಪಾದ್ಯಕ್ಷರು ರಾಜೇಶ್ ಕುಮಾರ್ ಸಿಂಗ್, ಖಜಾಂಸಿ ಸಂತೋಷ ಠಾಕೂರ್ ಮುಂತಾದವರು ಹಾಜರಿದ್ದರು.