ಓ ಮೈ ಗಾಡ್…. ನೆಲ್ಯಾಡಿಯ ಪೇರಿಯಶಾಂತಿಲ್ಲಿ ಭೂತದ ಡ್ಯಾನ್ಸ್…! ?

442

ನೆಲ್ಯಾಡಿಯ ಇಚಿಲಂಪಾಡಿಯಲ್ಲಿ ಜೆಸಿಬಿ ಇಟ್ಟುಕೊಂಡಿದ್ದಾರೆ ಪ್ರವೀಣ್. ನಿನ್ನೆ ಬೆಳಿಗ್ಗೆ ಜೆಸಿಬಿಗೆ ಡೀಸೆಲ್ ತರಲೆಂದು ಚಾಲಕ ತಂಗರಾಜುವನ್ನು ನೆಲ್ಯಾಡಿಗೆ ಕಳುಹಿಸಿದ್ದಾರೆ. ಮುಂಜಾನೆಯ ಮಂಜಿನಿಂದ ರಸ್ತೆಯೇ ಕಾಣುತ್ತಿರಲಿಲ್ಲ.  ರಬ್ಬರ್ ಎಸ್ಟೇಟ್ ಬಳಿ ಬರುತ್ತಿದ್ದಂತೇ, ಒಂದೆಡೆ ಸೂರ್ಯ ಕಿರಣಗಳು ರಸ್ತೆ ಮೇಲೆ ಬಿದ್ದು ಚಿತ್ತಾರ ಮೂಡಿಸಿದ್ದವು. ಅರರೇ… ಇದೊಂಥರಾ ಚೆನ್ನಾಗಿದೆಯಲ್ಲಾ ಎಂದುಕೊಂಡ ತಂಗರಾಜು, ತಮ್ಮ ಮೊಬೈಲ್ ನಲ್ಲಿ ಕ್ಲಿಕ್ ಮಾಡಿದ್ದಾರೆ.
ಅಲ್ಲಿಂದ ಮನೆಗೂ ಬಂದಿದ್ದಾರೆ. ಮನೆಯಲ್ಲಿ ಸಂಜೆ ಮೊಬೈಲ್ ತೆಗೆದು ನೋಡಿದಾಗ, ಮೈ ಜುಂ ಅಂದಿದೆ. ಮೊಬೈಲ್ ನಲ್ಲಿ ಸೂರ್ಯನ ಕಿರಣಗಳು ಒಂದು ಆಕೃತಿ ಮೇಲೆ ಬಿದ್ದು, ಅದು ಮಿರ ಮಿರ ಮಿಂಚುತ್ತಿತ್ತು. ನೋಡೋಕೆ ಅದು ಮನುಷ್ಯಾಕೃತಿಯೇ ಆಗಿದೆ. ಇದರಿಂದ ಬೆಚ್ಚಿಬಿದ್ದ ತಂಗರಾಜು, ಮಾಲೀಕ ಪ್ರವೀಣ್ ತಿಳಿಸಿದ್ದಾರೆ. ಈಗ ನೆಲ್ಯಾಡಿ ಅಸು ಪಾಸಿನಲ್ಲಿ ಈ ಫೋಟೋ ವೈರಲ್ ಆಗಿದೆ. ತಂಗರಾಜು ಮೊಬೈಲ್ ಕ್ಲಿಕ್ಕಿಸಿದ ಸ್ಥಳದಲ್ಲೇ ಸ್ಮಶಾನವೊಂದಿದೆ. ಹೀಗಾಗಿ, ಸ್ಥಳೀಯರಲ್ಲಿ ಈ ಆಕೃತಿ ದೆವ್ವದ್ದೇ ಎಂಬ ಭೀತಿ ಆವರಿಸಿದೆ.