ವಿಕಾಸಪರ್ವ ಯಾತ್ರೆ..

210

ಮಂಡ್ಯ/ ಮಳವಳ್ಳಿ: ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ನಡೆದ ಬೆನ್ನಲ್ಲೇ ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಕುಮಾರಪರ್ವ ಕಾರ್ಯಕ್ರಮ ವಿಕಾಸವಾಹಿನಿ ಯಾತ್ರೆ ಮೂಲಕ ಮಳವಳ್ಳಿ ಪಟ್ಟಣ ಹಾಗೂ ಕಿರುಗಾವಲು ಹೋಬಳಿ ಇಂದು ನಡೆಸಲಿದ್ದಾರೆ. ಮಳವಳ್ಳಿ ತಾಲ್ಲೂಕಿನ ಚಿಕ್ಕಮೂಲಗೂಡು.ಹಿಟ್ಟನಹಳ್ಳಿ, ತಳಗವಾದಿ.ಕಾಗೇಪುರ ಗ್ರಾಮಗಳಿಗೆ ಜೆಡಿಎಸ್ ಕಾರ್ಯಕರ್ತರೊಂದಿಗೆ ಬೈಕ್ ಜಾಥ ನಡೆಸಿ. ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಜನರಲ್ಲಿ ಮಾಡಿಕೊಳ್ಳಲಿದ್ದು, ನಂತರ ಮಳವಳ್ಳಿ ಪಟ್ಟಣದ ಅನಂತರಾಂ ವೃತ್ತದಲ್ಲಿ ಬಹಿರಂಗಸಭೆಯನ್ನು ಏರ್ಪಸಲಾಗಿದ್ದು. ಸಂಜೆ 5 ಗಂಟೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭಾಷಣ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ರವಿ ನೇತೃತ್ವದಲ್ಲಿ ಪಟ್ಟಣದಲ್ಲಿ ಬೈಕ್ ಜಾಥವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ, ಜೆಡಿಎಸ್ ಪಕ್ಷ ರೈತರಪರವಿರುವ ಪಕ್ಷ ,ಸರ್ವಜ‌ನಾಂಗ ಮೆಚ್ಚಿವಂತಹ ಪಕ್ಷ , ಈ ಬಾರಿ ಹೆಚ್ ಡಿ ಕುಮಾರಸ್ವಾಮಿ ರವರು ಮುಖ್ಯಮಂತ್ರಿ ಯಾಗುವುದುಖಚಿತ. ಅದಕ್ಕಾಗಿ ಈ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಕೆ.ಅನ್ನದಾನಿರವರಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೆಹಬೂಬ್ ಪಾಷ,ರಾಜಣ್ಣ ನಂದಕುಮಾರ, ಸೇರಿದಂತೆ ಮತ್ತಿತ್ತರರು ಇದ್ದರು