ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ..

214

ಚಿಕ್ಕಬಳ್ಳಾಪುರ/ಚಿಂತಾಮಣಿ:ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡು ಪ್ರಮುಖ ಪಕ್ಷಗಳ ಬಂಡಾಯ ನಾಯಕರು ಇಂದು ಒಂದೆಡೆ ಸೇರಿದ್ದರು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಚಾರ್ಲಹಳ್ಳಿಯಲ್ಲಿ ನಡೆದ ಚಿಲಕಲನೇರ್ಪು ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಮೇಲೂರು ರವಿಕುಮಾರ್ ಗೆ , ಕಾಂಗ್ರೆಸ್ ಬಂಡಾಯ ನಾಯಕ ಶ್ರೀರಾಮರೆಡ್ಡಿ ಬೆಂಬಲ ಸೂಚಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದರು.

ನಮ್ಮ ಸಹಕಾರವಿಲ್ಲದೆ ಅದು ಹೇಗೆ ರಾಜಣ್ಣ ಈ ಬಾರಿ ಗೆಲ್ಲುತ್ತರೋ ನಾವು ನೋಡುತ್ತೇವೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ಮೇಲೂರು ರವಿಕುಮಾರ್ ಜೆಡಿಎಸ್ ಶಾಸಕ ರಾಜಣ್ಣ ರವರಿಗೆ ಈ ಸಂದರ್ಭದಲ್ಲಿ ಸವಾಲೆಸೆದಿದ್ದಾರೆ .
ಕಳೆದ ಬಾರಿ ಕೆಲವು ಷರತ್ತುಗಳ ಮೇಲೆ ನಾವೆಲ್ಲಾ ರಾಜಣ್ಣ ಗೆಲುವಿಗೆ ಶ್ರಮಿಸಿದ್ದೆವು. ಆದರೆ ಗೆದ್ದ ನಂತರ ಕ್ಷೇತ್ರದ ಅಭಿವೃದ್ಧಿಯನ್ನು ಮರೆತು ಅವರು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.

ಕಳೆದ 12 ವರ್ಷಗಳಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ರೀತಿಯಾಗಿ ಸಹಕಾರ ಬೆಂಬಲ ನೀಡಿ ರಾಜಣ್ಣರವರನ್ನು ಶಾಸಕರನ್ನಾಗಿ ಮಾಡಿದಗದೇವೆ . ಆದರೆ ಇತ್ತೀಚಿನ ದಿನಗಳಲ್ಲಿ ರಾಜಣ್ಣರವರು ಪಕ್ಷದ ಪ್ರಮುಖ ಮುಖಂಡರನ್ನು ಕಡೆಗಣಿಸಿ ತಮ್ಮಗೆ ಮನಬಂದಂತೆ ಭ್ರಷ್ಟಾಚಾರದಲ್ಲಿ ಮುಳಗಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ ಹೀಗಾಗಿ ಕಾರ್ಯಕರ್ತರ ಒತ್ತಾಯದ ಮೇರೆಗೆ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ರವಿ ಕುಮಾರ್ ಹೇಳಿದರು.

ಚಿಲಕಲನೇರ್ಪು ಹೋಬಳಿಯ ಕಾಂಗ್ರೆಸ್ ಪ್ರಭಾವಿ ಮುಖಂಡ ಎನ್.ವಿ ಶ್ರೀರಾಮ ರೆಡ್ಡಿ ಹಾಗೂ ಅವರ ಕಾರ್ಯಕರ್ತರು ತಮಗೆ ಬೆಂಬಲ ನೀಡುತ್ತಿರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಬಂಡಾಯ ನಾಯಕ ಶ್ರೀರಾಮ ರೆಡ್ಡಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾಜಿ ಶಾಸಕ ವಿ ಮುನಿಯಪ್ಪನವರು ನಾವು ಕೆ.ಹೆಚ್ ಮುನಿಯಪ್ಪ ನವರ ಜೊತೆಗಿದ್ದೇವೆ ಎಂಬ ಮಾಜಿ ಶಾಸಕ ಎಂ ಸಿ ಸುಧಾಕರ್ ಅವರು ಮಾತುಗಳನ್ನು ನಂಬಿ ನಮ್ಮನ್ನು ಹಾಗೂ ನಮ್ಮ ಕಾರ್ಯಕರ್ತರನ್ನು ಕಡೆಗೆಣಿಸುತ್ತಿದ್ದಾರೆ. ಹೀಗಾಗಿ ನಾನು ಮತ್ತು ನನ್ನ ಬೆಂಬಲಿಗರು
ಜೆಡಿಎಸ್ ಬಂಡಾಯ ಅಭ್ಯರ್ಥಿ ರವಿಕುಮಾರ್ ಅವರಿಗೆ ಈ ವಿಧಾನಸಭೆ ಚುನಾವಣೆಯಲ್ಲಿ ಬೆಂವಿಸುತ್ತಿದ್ದೇವೆ ಎಂದು ಹೇಳಿದರು .
ಒಂದು ವೇಳೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ವಿ.ಮುನಿಯಪ್ಪನವರನ್ನು ಹೊರತುಪಡಿಸಿ ಬೇರೆ ಯಾರೇ ಕಾಂಗ್ರೇಸ್ ನಿಂದ ಸ್ವರ್ಧಿಸಿದರೂ ಅವರಿಗೆ ಬೆಂಬಲಿಸುವುದಾಗಿ ಶ್ರೀರಾಮರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಂಚಾರ್ಲಹಳ್ಳಿ ಕೃಷ್ಣಾರೆಡ್ಡಿ ಕೊಡೇಗಂಡ್ಲು ನಾರಾಯಣಸ್ವಾಮಿ , ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ ,ತನುಜಾ ರಘು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ತಾ.ಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ ,ಉಪಾಧ್ಯಕ್ಷ ಹೆಚ್ ನರಸಿಂಹಯ್ಯ ಸೇರಿದಂತೆ ಚಿಲಕಲನೇರ್ಪು ಹೋಬಳಿಯ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಮತಿತ್ತರರು ಉಪಸ್ಥಿತಿಯಿದರು.