ಕರ್ತವ್ಯ ಗೌರವಿಸಿ, ಬಡವರಿಗೆ ಸಹಾಯ ಮಾಡಿ..

497

ಬೆಂಗಳೂರು/ಹೊಸಕೋಟೆ:- ತಮ್ಮ ಕರ್ತವ್ಯವನ್ನು ಗೌರವಿಸಿ ಬಡವರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಬಾವಿ ವೈದ್ಯರಿಗೆ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂತರ್ಿ ಕಿವಿಮಾತು ಹೇಳಿದರು. ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಎಂವಿಜೆ ಮೆಡಿಕಲ್ ಕಾಲೇಜಿನ 9 ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು, ಮೆಡಿಕಲ್ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರು ಹೆಚ್ಚಿರುವ ಗ್ರಾಮಾಂತರ ಭಾಗಗಳಲ್ಲಿ ಕಾರ್ಯ ನಿರ್ವಹಿಸಿ ಅವರ ಆರೋಗ್ಯ ಸುಧಾರಿಸುವತ್ತ ಹೆಚ್ಚು ಗಮನ ನೀಡಬೇಕು. ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದರೆ ಇತರರಿಗೆ ಸೆಲ್ಯೂಟ್ ಹೊಡೆಯಬೇಕಿಲ್ಲ, ಕರ್ತವ್ಯದಲ್ಲಿ ಲೋಪವಾದಾಗ ಮಾತ್ರ ಇತರರಿಗೆ ಸೆಲ್ಯೂಟ್ ಹೊಡೆಯಬೇಕಾಗುತ್ತದ್ದೆ ಆದ್ದರಿಂದ ತಮ್ಮ ವೈದ್ಯಕೀಯ ಕರ್ತವ್ಯವನ್ನು ಇಷ್ಟಪಟ್ಟು ಮಾಡಿ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ನಮ್ರತ ಎಂಬ ವಿದ್ಯಾರ್ಥಿನಿ ಐದು ಚಿನ್ನದ ಪದಕಗಳನ್ನು ಪಡೆದಿದ್ದು, ವಿದ್ಯಾರ್ಥಿನಿಯ ಸಾಧನೆಗೆ ನೆರದಿದ್ದ ಗಣ್ಯರು ಅಭಿನಂದನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಎಕನಾಮಿಸ್ಟ್ ಹಾಗೂ ಪತ್ರಕರ್ತ ಗುರುಮೂರ್ತಿ, ಎಂ.ವಿ.ಜೆ ಕಾಲೇಜಿನ ಎಂಡಿ ಮೊಹನ್, ಸಿಇಒ ದರಣಿ ಮೋಹನ್, ಎಂ.ವಿ.ಜೆ ಸಂಸ್ಥೆಯ ಮುಖ್ಯಸ್ಥರು ಮೋಹನ್ ರಾವ್, ವೆಂಕಟಾದ್ರಿ, ಸುರೇಂದ್ರ ಮುಂದಾದರು ಹಾಜರಿದ್ದರು.

ಬೈಟ್:- ನಾರಾಯಣ ಮೂರ್ತಿ, ಇನ್ಫೋಸಿಸ್ ಸಂಸ್ಥಾಪಕ.

ಬೈಟ್:- ಡಾ.ನಮ್ರತಾ ಶ್ರೀನಿವಾಸನ್, ಗೋಲ್ಡ್ಮೆಡಲ್ ಸ್ಟುಡೆಂಟ್.