ಮಹಿಳಾ ಘಟಕ ಉದ್ಘಾಟನೆ

190

ಮಂಡ್ಯ/ ಮಳವಳ್ಳಿ: ಸಾಲದ ಸುಳಿವಿನಲ್ಲಿ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳೆ ಸಂದಘಟನೆ ಜಿಲ್ಲಾಧ್ಯಕ್ಷೆ ದೇವಿ ವಿಷಾದ ವ್ಯಕ್ತಪಡಿಸಿದರು.
ಮಳವಳ್ಳಿ ತಾಲ್ಲೂಕಿನ ಉಗ್ರಾಣಪುರದದೊಡ್ಡಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಗ್ರಾಣಪುರದ ದೊಡ್ಡಿ ಘಟಕ ಉದ್ಘಾಟಿಸಿ ಮಾತನಾಡಿ , ಹೆಣ್ಣು ಎಂಬ ಕೀಳುಭಾವನೆಯಿಂದ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಅದನ್ನು ನಾವೆಲ್ಲರೂ ಹೋರಾಟ ಮಾಡ ಬೇಕಾಗಿದೆ. ಸ್ತ್ರೀ ಶಕ್ತಿ ಸಂಘ ಗಳ ಮೂಲಕ ಸಾಲ ಮಾಡಿ ಗಂಡಸರಿಗೆ ಕೊಟ್ಟು ಸ್ತ್ರೀ ಯರು ಷೋಷಣೆಗೆ ಒಳಗಾಗಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಲು ಸಂಘಟಿತ ರಾಗಬೇಕಾಗಿದೆ ಎಂದರು. ವಿಧಾನ ಸಭೆಯಲ್ಲಿ ಸಹ ಶೇ 30 ರಷ್ಟು ಮಹಿಳೆರಿಗೂ ಮೀಸಲಾತಿ ನೀಡಬೇಕು ಎಂದು ಜನವಾದಿ ಮಹಿಳೆ ಸಂಘಟನೆ ಹೋರಾಟ ಮಾಡುತ್ತಿದೆ ಅದಕ್ಕೆ ಮಹಿಳೆಯರು ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮ ದಲ್ಲಿ ಜನವಾದಿ ಮಹಿಳೆ ಸಂಘಟನೆ ತಾಲ್ಲೂಕು ಅಧ್ಯಕ್ಷೆ ಸುಶೀಲ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಜಿಲ್ಲಾ ಕಾರ್ಯದರ್ಶಿ ಸುನೀತಾ,ಜಿಲ್ಲಾ ಖಜಾಂಚಿ ಶೋಭ, ಮದ್ದೂರು ತಾಲ್ಲೂಕು ಅಧ್ಯಕ್ಷೆ ಲತಾ,ತಾಲ್ಲೂಕು ಕಾರ್ಯದರ್ಶಿ ಮಂಜುಳ ಸೇರಿದಂತೆ ಮತ್ತಿತರರು ಇದ್ದರು