ಪೋಲೀಸ್ ಧ್ವಜ ದಿನಾಚರಣೆ…

237

ಚಾಮರಾಜನಗರ:ಜಿಲ್ಲಾ ಪೋಲೀಸ್ ವತಿಯಿಂದ ಧ್ವಜ ದಿನಾಚರಣೆಯನ್ನ ಆಚರಿಸಲಾಯ್ತು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ, ಜಿಲ್ಲಾಶಸ್ತ್ರ ನ್ಯಾಯಾದೀಶರಾದ ಬಿ.ಬಸವರಾಜ್ ರವರು ಧ್ವಜವಂದನೆ ಸ್ವೀಕರಿಸುವುದರ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದ್ರು. ತದ ನಂತರ ಅತಿಥಿ ಗಣ್ಯರು ಪೋಲೀಸ್ ಧ್ವಜವನ್ನ ಬಿಡುಗಡೆ ಮಾಡಿದ್ರು. ನಂತರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅನೇಕ ಹಿರಿಯರಿಗೆ ಸನ್ಮಾನ ಮಾಡಲಾಯ್ತು.ಗಡಿ ಕಾಯೋ ಯೋಧರನ್ನ ಬಿಟ್ರೆ, ೨೪/೭ ಕೆಲಸ ನಿರ್ವಹಿಸುವಂತಹ ಇಲಾಖೆ ಅಂದ್ರೆ ಅದು ಪೊಲೀಸ್ ಇಲಾಖೆ.ನಾವೆಲ್ಲ ಮನೆಯಲ್ಲಿ ನೆಮ್ಮದಿಯಿಂದ ಇದಿವಿ ಅಂದ್ರೆ ಅದಕ್ಕೆ ಕಾರಣ ಪೊಲೀಸ್ ಇಲಾಖೆಯ ಸೇವೆ.ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿರಬೇಕಾದ್ರೆ ಅದರ ಹೊಣೆಯನ್ನ ಪೊಲೀಸ್ ಇಲಾಖೆ ಹೊರಬೇಕಾಗುತ್ತದೆ.

ಅನೇಕ ಸಂದರ್ಭಗಳಲ್ಲಿ ಪೊಲೀಸ್ ರು ತಮ್ಮ ಪ್ರಾಣವನ್ನೆ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅಂತಹವರಿಗೆ ಕಲ್ಯಾಣ ನಿಧಿಯಿಂದ ಹಣ ಸಂಗ್ರಹಿಸಿ ಕೊಡುವುದು ಒಳ್ಳೆಯದು. ಸೇವೆಗೆ ಸೇರಿದಾಗಿನಿಂದ ನಿವೃತ್ತಿ ಹೊಂದುವವರೆಗೂ ಸೇವೆಯಲ್ಲಿ ನಿರತರಾಗಿರುತ್ತಾರೆ. ಅಂತಹವರಿಗೆ ಕನಿಷ್ಠ ಭದ್ರತೆಯನ್ನಾದರೂ ಕೂಡ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ರು.

ಬೈಟ್:- ಜಿ.ಬಸವರಾಜು. ಜಿಲ್ಲಾ ಮತ್ತು ಶಸ್ತ್ರ ನ್ಯಾಯಾದೀಶರು. ಚಾಮರಾಜನಗರ.