ಜನಾರ್ಶೀವಾದ ಕಾರ್ಯಕ್ರಮ ೭ಕ್ಕೆ…

366

ಚಿಕ್ಕಬಳ್ಳಾಪುರ:ರಾಹುಲ್ ಗಾಂಧಿಯವರ ಜನಾರ್ಶೀವಾದ ಕಾರ್ಯ ಕ್ರಮ.ಕರ್ನಾಟಕ ರಾಜ್ಯಾದ್ಯಂತ ಕಾಂಗ್ರೆಸ್ ನ ರಾಷ್ಟ್ರೀಯ ಅದ್ಯಕ್ಷರಾದ ರಾಹುಲ್ ಗಾಂಧಿಯವರು ಕರ್ನಾಟಕದಾದ್ಯಂತ ಪ್ರವಾಸವನ್ನ ಕೈಗೊಂಡಿದ್ದಾರೆ ಹಾಗೇಯೇ ಇದೇ ತಿಂಗಳ 7 ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಜನಾರ್ಶೀವಾದ ಕಾರ್ಯ ಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಹಾಗು ಇದೇ ತಿಂಗಳ 8 ರಂದು ಬೆಂಗಳೂರಿನಲ್ಲಿ ಯೂ ಸಹ ಬೃಹತ್ ಜನಾರ್ಶೀವಾದ ಕಾರ್ಯ ಕ್ರಮ ವನ್ನ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ದ್ಯಕ್ಷರಾದ ಕೇಶವರಡ್ಡಿ ರವರು ತಿಳಿಸಿದರು. ಚಿಕ್ಕಬಳ್ಳಾಪುರ ದ ಕಾರ್ಯ ಕ್ರಮದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದಿಂದ ಸುಮಾರು ಒಂದು ಲಕ್ಷ ಜನ ಸೇರುವ ನೀರೀಕ್ಷೆ ಇದೆ ಎಂದು ಕಾಂಗ್ರೆಸ್ ನ ಜಿಲ್ಲಾದ್ಯಕ್ಷರಾದ ಕೇಶವರಡ್ಡಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಂತರ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಡಾ!! ಕೆ ಸುಧಾಕರ್ ರವರು ಮಾತನಾಡಿ ಈ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ದಲ್ಲಿ ಮಾಡಿದಂತಹ 165 ಯೋಜನೆ ಗಳಿಗು ಹೆಚ್ಚಿನ ಕಾರ್ಯ ಕ್ರಮಗಳನ್ನು ಮಾಡಿದ್ದಾರೆ. ಇದುವರೆಗೆ ಇದ್ದಂತಹ ಯಾವುದೇ ಸರ್ಕಾರಗಳು ಮಾಡದೆ ಇರುವಷ್ಟು ಯೋಜನೆಗಳು ಸಿದ್ದರಾಮಯ್ಯನವರು ಮಾಡಿದ್ದಾರೆ. ಈ ಮುಂದಿನ ಚುನಾವಣೆಯಲ್ಲಿ ಯೂ ಸಹ ರಾಜ್ಯದಲ್ಲಿ ಹೆಚ್ಚಿನ ಬಹು ಮತ ಬಂದು ಮತ್ತೆ ಅವರೇ ಮುಂದಿನ ಮುಖ್ಯ ಮಂತ್ರಿಯಾಗಿ ಮುಂದು ವರೆಯುವದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯ ವನ್ನ ವ್ಯಕ್ತ ಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಖಾಧಿ ಗ್ರಾಮೋದ್ಯೋಗ ಮಂಡಳಿ ಅದ್ಯಕ್ಷ ರಾದ ಯಲುವಲ್ಲಿ ರಮೇಶ್. ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ ಹಾಗು ಅನುಸೂಯಮ್ಮ ನಟರಾಜ. ನಗರಸಭಾದ್ಯಕ್ಷರಾದ ಮುನಿಕೃಷ್ಣ ,ಕೆ.ವಿ.ನಾಗರಾಜ ಜಿಲ್ಲಾದ್ಯಕ್ಷರಾದ ಹೊಸೂರು ಮಂಜುನಾಥ ಹಾಜರಿದ್ದರು..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ