ನದಿಯಲ್ಲಿ ಈಜಲು ಹೋಗಿ ಸಾವು…

195

ಮಂಡ್ಯ/ಮಳವಳ್ಳಿ:ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ ಯುವಕನೊಬ್ಬ ಕಾವೇರಿ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ.ಮಂಗಳೂರು ಮೂಲದ ಪ್ರಶಾಂತ್ ಶೆಟ್ಟಿ (24) ಮೃತಪಟ್ಟ ದುದೈವಿ.13 ಜನರ ತಂಡದೊಂದಿಗೆ ಬಂದಿದ್ದ ಪ್ರಶಾಂತ್ ಶೆಟ್ಟಿ ಕಾವೇರಿ ನದಿಯಲ್ಲಿ ಈಜು ಸಂದರ್ಭದಲ್ಲಿ ಸುಳಿಗೆ ಸಿಲುಕಿ ಸಾವನ್ನಪ್ಪಿದ ಎನ್ನಲಾಗಿದೆ.ಸ್ಥಳಕ್ಕೆ ಹಲಗೂರು ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ಭೇಟಿ ಸ್ಥಳ ಪರಿಶೀಲನೆ ನಡೆಸಿದ್ದು. ಮೃತ ಪ್ರಶಾಂತ್ ಶೆಟ್ಟಿ ಯ ಸ್ನೇಹಿತ ರಿಂದ ಮಾಹಿತಿ ಸಂಗ್ರಹಿಸಿದರು. ಈ ಸಂಬಂಧ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ