“ಮುಷ್ಟಿ ಅಕ್ಕಿ” ಸಂಗ್ರಹಣೆ ಕಾರ್ಯಕ್ರಮ…

235

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟು ಇಂದು ” ಆನೂರು” “ಹುಣಸೇನಹಳ್ಳಿ” ಗ್ರಾಮಗಳಿಗೆ ತೆರಳಿ “ಮುಷ್ಟಿ ಅಕ್ಕಿ” ಸಂಗ್ರಹಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಆನೂರಿನ ಸತ್ಯನಾರಾಯಣರವರು ಡಿ ಆರ್.ಶಿವಕುಮಾರ್ ರವರನ್ನ ಆತ್ಮೀಯವಾಗಿ ಸ್ವಾಗತಿಸಿದರು ಅವರಿಗೆ ಹೂ ಮಾಲೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ಶಿಡ್ಲಘಟ್ಟ ನಗರದ “20” ನೇ ವಾರ್ಡಿನ “ಮುಸ್ಲಿಂ” ಬಾಂದವರು.ಡಿ.ಆರ್.ಶಿವಕುಮಾರ್ ಗೌಡರಿಗೆ ಮಾಲಾರ್ಪಣೆ ಮಾಡಿ ಆತ್ಮೀಯವಾಗಿ ಸ್ವಾಗತಿಸಿ, ಬಿಜೆಪಿ ಗೆ ಸೇರ್ಪಡೆಗೊಂಡು ಬೆಂಬಲ ಸೂಚಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಿ.ಆರ್.ಶಿವಕುಮಾರ್ ಗೌಡರು ಜನರನ್ನು ಉದ್ದೇಶಿಸಿ ನಿಮಗೆ.ನಿಮ್ಮ ಹಳ್ಳಿಗೆ.ರಾಜ್ಯಕ್ಕೆ.ದೇಶಕ್ಕೆ. ಒಳ್ಳೆಯದಾಗಲಿ ಎಂದು ಮನವರಿಕೆ ಮಾಡಿದರು.”ಈ ಬಾರಿ ಈ ಸಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಹಾಗೂ”ಶಿಡ್ಲಘಟ್ಟ ದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಿದರೆ ಈ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯನ್ನು ಮಾಡುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ನಂದೀಶ್.ಮತ್ತು ಮಳ್ಳೂರು ಮಂಜುನಾಥ್.ಮುನಿರಾಜು. ಮುನೇಗೌಡ.ಮುತ್ತೂರು ಬೈರೆಗೌಡ.ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಹಾಜರಿದ್ದರು..